TSK

TSK · ವಿಮೋಚನಕಾಂಡ 28:29

مراجع Treasury of Scripture Knowledge في ಕನ್ನಡ IRV.

العودة إلى المقطع

ಆ ಎರಡು ರತ್ನಗಳನ್ನು ಹೆಗಲಿನ ಮೇಲಿರುವ ಏಫೋದಿನ ಪಟ್ಟಿಗಳಲ್ಲಿ ಹಾಕಿಸಬೇಕು. ಅವು ಇಸ್ರಾಯೇಲರ ಜ್ಞಾಪಕಾರ್ಥವಾದ ರತ್ನಗಳಾಗಿರುವವು. ಆರೋನನು ಯೆಹೋವನ ಸನ್ನಿಧಿಯಲ್ಲಿ ಹೋಗುವಾಗೆಲ್ಲಾ ಇಸ್ರಾಯೇಲರ ಕುಲಗಳ ಹೆಸರುಗಳನ್ನು ಆತನ ನೆನಪಿಗೆ ತರುವುದಕ್ಕಾಗಿ ತನ್ನ ಎರಡೂ ಭುಜಗಳ ಮೇಲೆ ಅವುಗಳನ್ನು ಧರಿಸಿಕೊಂಡು ಹೋಗುವನು.

ದೈವನಿರ್ಣಯವನ್ನು ತಿಳಿಸುವ ಊರೀಮ್ ತುಮ್ಮೀಮ್‌ ಆ ಎದೆಯ ಪದಕದಲ್ಲಿ ಇಡಬೇಕು. ಆರೋನನು ಯೆಹೋವನ ಸನ್ನಿಧಿಗೆ ಹೋಗುವಾಗ ಅವು ಅವನ ಎದೆಯ ಮೇಲೆ ಇರುವವು. ಇಸ್ರಾಯೇಲರು ಕೈಕೊಳ್ಳಬೇಕಾದ ದೈವನಿರ್ಣಯವನ್ನು ಆರೋನನು ಹೀಗೆ ತನ್ನ ಹೃದಯದ ಮೇಲೆ ಯೆಹೋವನ ಸನ್ನಿಧಿಯಲ್ಲಿ ಯಾವಾಗಲೂ ಧರಿಸಿಕೊಂಡಿರಬೇಕು.

ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತರು ಮರೆತಾಳು, ಆದರೆ ನಾನು ನಿನ್ನನ್ನು ಮರೆಯುವುದಿಲ್ಲ.

¶ ಸಹೋದರರೇ, ಇಸ್ರಾಯೇಲ್ಯರು ರಕ್ಷಣೆ ಹೊಂದಬೇಕೆಂಬುದೇ ನನ್ನ ಮನೋಭಿಲಾಷೆಯೂ ಮತ್ತು ದೇವರಿಗೆ ನಾನು ಮಾಡುವ ವಿಜ್ಞಾಪನೆಯೂ ಆಗಿದೆ.