TSK

TSK · ಯೋವೇಲ 1:18

مراجع Treasury of Scripture Knowledge في ಕನ್ನಡ IRV.

العودة إلى المقطع

ಅಹಾಬನು ಅವನಿಗೆ, “ನಾವು ದೇಶಸಂಚಾರ ಮಾಡುತ್ತಾ, ಎಲ್ಲಾ ಬುಗ್ಗೆ ಹಳ್ಳಗಳಿಗೆ ಹೋಗಿ ಅವುಗಳಲ್ಲಿ ಹುಲ್ಲು ಸಿಕ್ಕುತ್ತದೋ ನೋಡೋಣ. ಸಿಕ್ಕುವುದಾದರೆ ನಮ್ಮ ಕುದುರೆಗಳೂ ಮತ್ತು ಹೇಸರಗತ್ತೆಗಳೂ ಉಳಿದಾವು, ಇಲ್ಲವಾದರೆ ಸತ್ತುಹೋಗುವವು” ಎಂದು ಹೇಳಿದನು.

ಇದಲ್ಲದೆ ಹೆಣ್ಣು ಜಿಂಕೆಯು ಕಾಡಿನಲ್ಲಿ ಈದು, ಹುಲ್ಲಿಲ್ಲದ ಕಾರಣ ತನ್ನ ಮರಿಯನ್ನು ಬಿಟ್ಟುಬಿಡುತ್ತದೆ.

ಅಡವಿಯ ಮೃಗಗಳು ಸಹ ನಿನ್ನ ಕಡೆಗೆ ತಲೆಯೆತ್ತಿವೆ. ನೀರಿನ ಹೊಳೆಗಳು ಬತ್ತಿಹೋಗಿವೆ. ಕಾಡಿನ ಹುಲ್ಲುಗಾವಲನ್ನು ಬೆಂಕಿಯು ದಹಿಸಿಬಿಟ್ಟಿದೆ.