TSK

TSK · ನೆಹೆಮಿಯ 12:39

مراجع Treasury of Scripture Knowledge في ಕನ್ನಡ IRV.

العودة إلى المقطع

¶ ಹೀಗೆ ಮಹಾಯಾಜಕನಾದ ಎಲ್ಯಾಷೀಬನೂ ಅವನ ಕುಟುಂಬದ ಯಾಜಕರೂ ಕುರಿಬಾಗಿಲನ್ನು ಕಟ್ಟಿ ಅದನ್ನು ಪ್ರತಿಷ್ಠಿಸಿ ಅದಕ್ಕೆ ಬಾಗಿಲುಗಳನ್ನು ಇಟ್ಟರು. ಅಲ್ಲಿಂದ ಹಮ್ಮೆಯಾ ಗೋಪುರದವರೆಗೆ ಗೋಡೆಕಟ್ಟಿ ಅದನ್ನು ಪ್ರತಿಷ್ಠಿಸಿದರು. ಅಲ್ಲಿಂದ ಹನನೇಲ್ ಗೋಪುರದವರೆಗೂ ಕಟ್ಟಿದರು.

¶ ಹಳೆಯದಾಗಿದ್ದ ಬಾಗಿಲುಗಳ ಜೀರ್ಣೋದ್ಧಾರ ಮಾಡಿದವರು ಪಾಸೇಹನ ಮಗನಾದ ಯೋಯಾದನೂ, ಬೆಸೋದ್ಯನ ಮಗನಾದ ಮೆಷುಲ್ಲಾಮನೂ. ಇವರು ಅವುಗಳಿಗೆ ಹೊಸ್ತಿಲುಗಳನ್ನಿಟ್ಟು ಅದಕ್ಕೆ ಬಾಗಿಲು, ತಿರುಗುಣಿ, ಅಗುಳಿಗಳನ್ನು ಇರಿಸಿದರು.

¶ ಇನ್ನೂ ಮುಂದಕ್ಕೆ ಅಕ್ಕಸಾಲಿಗರ ಮಲ್ಕೀಯ. ಇವನು ಸೈನ್ಯದವರು ಸೇರಿಬರುವ ಬಾಗಿಲಿನೆದುರಿನಲ್ಲಿರುವ ದೇವಾಲಯದ ಸೇವಕರ ಮತ್ತು ವರ್ತಕರ ಕೇರಿಯ ವರೆಗೂ ಮತ್ತು ಮೂಲೆಯುಪ್ಪರಿಗೆಯವರೆಗೂ ಜೀರ್ಣೋದ್ಧಾರ ಮಾಡಿದನು.

¶ ಯೆಹೋವನು, “ಇಗೋ, ಮುಂದಿನ ಕಾಲದಲ್ಲಿ ಈ ಪಟ್ಟಣವು ಹನನೇಲನ ಬುರುಜಿನಿಂದ ಮೂಲೆಯ ಬಾಗಿಲಿನವರೆಗೆ ಯೆಹೋವನ ಘನತೆಗಾಗಿ ವಿಸ್ತರಿಸುವುದು.

ಅದೇ ದಿನದಲ್ಲಿ ಮೀನುಬಾಗಿಲಿನಿಂದ ಕೂಗಾಟ, ಎರಡನೆಯ ಕೇರಿಯಿಂದ ಗೋಳಾಟ, ಗುಡ್ಡಗಳ ಮೇಲಿನಿಂದ ಭೀಕರ ಶಬ್ದವನ್ನು ಕೇಳುವಿರಿ, ಅಂತು ದೊಡ್ಡ ಗದ್ದಲವಾಗುವುದು” ಇದು ಯೆಹೋವನ ನುಡಿ.