TSK

TSK · 2 ಪೂರ್ವಕಾಲವೃತ್ತಾ 21:7

مراجع Treasury of Scripture Knowledge في Kannada KJV.

العودة إلى المقطع

ಆದರೆ ಚೆರೂಯಳ ಮಗನಾದ ಅಬೀಷೈಯು ಅವನಿಗೆ ಸಹಾಯವಾಗಿ ಬಂದು ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿ ದನು. ಆಗ ದಾವೀದನ ಜನರು ಅವನಿಗೆ--ನೀನು ಇಸ್ರಾಯೇಲಿನ ಬೆಳಕನ್ನು ಆರಿಸಿಬಿಡದ ಹಾಗೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಹೊರಡಬೇಡ ಎಂದು ಅವನಿಗೆ ಆಣೆಯಿಟ್ಟರು.

ಇದಲ್ಲದೆ ರಾಜ್ಯವನ್ನೆಲ್ಲಾ ನಾನು ಕಸಕೊಳ್ಳದೆ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ನಾನು ಆದುಕೊಂಡ ಯೆರೂಸಲೇಮಿಗೋಸ್ಕರವಾಗಿಯೂ ನಿನ್ನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು ಅಂದನು.

ಕರ್ತನು ದಾವೀದನಿಗೂ ಅವನ ಮಕ್ಕಳಿಗೂ ನಿರಂತರವಾಗಿ ದೀಪವನ್ನು ಕೊಡುವೆನೆಂದು ಅವನಿಗೆ ವಾಗ್ದಾನ ಮಾಡಿದ ಹಾಗೆ ತನ್ನ ಸೇವಕನಾದ ದಾವೀದನ ನಿಮಿತ್ತ ಯೆಹೂದವನ್ನು ಕೆಡಿಸಲು ಮನಸ್ಸಿಲ್ಲದೆ ಇದ್ದನು.

ಆದರೆ ಅರಸನ ಮಗಳಾದ ಯೆಹೋಷಬತಳು ಅಹಜ್ಯನ ಮಗನಾದ ಯೆಹೋವಾಷನನ್ನು ತಕ್ಕೊಂಡು ಕೊಂದುಹಾಕಲ್ಪಟ್ಟ ಅರಸನ ಮಕ್ಕಳ ಮಧ್ಯದಿಂದ ಅವನನ್ನು ಕದ್ದುಕೊಂಡು ಅವನನ್ನೂ ಅವನ ದಾದಿ ಯನ್ನೂ ಮಲಗುವ ಕೋಣೆಯಲ್ಲಿ ಇರಿಸಿದಳು. ಹೀಗೆ ಅತಲ್ಯಳು ಅವನನ್ನು ಕೊಲ್ಲದ ಹಾಗೆ ಅರಸನಾದ ಯೆಹೋರಾಮನ ಕುಮಾರ್ತೆಯಾಗಿರುವ ಯಾಜ ಕನಾದ ಯೆಹೋಯಾದನ ಹೆಂಡತಿಯಾಗಿರುವ ಯೆಹೋಷಬತಳು ಬಚ್ಚಿಟ್ಟಳು.

ನಿನ್ನ ಸೇವಕನ ಒಡಂಬಡಿಕೆಯನ್ನು ಅಸಡ್ಡೆಮಾಡಿ, ಅವನ ಕಿರೀಟವನ್ನು ನೆಲಕ್ಕೆ ಹಾಕಿ ಹೊಲೆ ಮಾಡಿದ್ದೀ.

ಅಲ್ಲಿ ದಾವೀದನಿಗೆ ಕೊಂಬನ್ನು ಮೊಳಿಸುವೆನು; ನನ್ನ ಅಭಿಷಿಕ್ತನಿಗೆ ದೀಪವನ್ನು ಸಿದ್ಧಮಾಡಿದ್ದೇನೆ.

ಹಗಲು ರಾತ್ರಿ ತಮ್ಮ ಕಾಲದಲ್ಲಿ ಆಗದ ಹಾಗೆ ಹಗಲಿನ ಸಂಗಡ ನನ್ನ ಒಡಂಬಡಿಕೆಯನ್ನೂ ರಾತ್ರಿಯ ಸಂಗಡ ನನ್ನ ಒಡಂಬಡಿಕೆಯನ್ನೂ ವಿಾರುವದಕ್ಕೆ ನಿಮ್ಮಿಂದಾದರೆ

ಕತ್ತಲೆಯಲ್ಲಿಯೂ ಮರಣದ ನೆರಳಿನಲ್ಲಿಯೂ ಕೂತವರಿಗೆ ಬೆಳಕನ್ನು ಕೊಡುವದಕ್ಕೂ ನಮ್ಮ ಪಾದಗಳನ್ನು ಸಮಾಧಾನದ ಮಾರ್ಗದಲ್ಲಿ ನಡಿಸುವದಕ್ಕೂ ಆಗುವದು ಎಂದು ಹೇಳಿದನು.