TSK

TSK · 2 ಸಮುವೇಲನು 13:21

مراجع Treasury of Scripture Knowledge في Kannada KJV.

العودة إلى المقطع

ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು.

ನನ್ನ ಜನರಾದ ಇಸ್ರಾಯೇಲ್ಯರು ನನಗೆ ಅರ್ಪಿಸುವ ತಮ್ಮ ಅರ್ಪಣೆಗಳಲ್ಲಿ ಪ್ರಾಮುಖ್ಯವಾದವುಗಳಿಂದ ನಿಮ್ಮನ್ನು ಕೊಬ್ಬಿಸಿಕೊಳ್ಳುವದಕ್ಕೆ ನನ್ನ ವಾಸಸ್ಥಳ ದಲ್ಲಿ ನಾನು ಆಜ್ಞಾಪಿಸಿದ ನನ್ನ ಬಲಿಯನ್ನೂ ಅರ್ಪಣೆಯನ್ನೂ ನೀವು ಒದ್ದು ನನಗಿಂತ ನಿನ್ನ ಮಕ್ಕಳನ್ನು ಘನಪಡಿಸುವದೇನು?

ಆಗ ದಾವೀದನು ಆ ಮನುಷ್ಯನ ಮೇಲೆ ಬಹಳ ಕೋಪಿಸಿಕೊಂಡು ನಾತಾನನಿಗೆ--ಕರ್ತನ ಜೀವದಾಣೆ, ಇದನ್ನು ಮಾಡಿದ ಆ ಮನುಷ್ಯನು ನಿಜವಾಗಿಯೂ ಸಾಯಬೇಕು.

ದುಷ್ಟ ತನ ಮಾಡುವವರೆಲ್ಲರನ್ನು ಕರ್ತನ ಪಟ್ಟಣದೊಳ ಗಿಂದ ಕಡಿದು ಬಿಡುವ ಹಾಗೆ ಬೆಳಿಗ್ಗೆ ದೇಶದ ದುಷ್ಟ ರೆಲ್ಲರನ್ನು ಸಂಹರಿಸುವೆನು.