ಆಮೇಲೆ ಆತನು ಸ್ವಲ್ಪದೂರ ಹೋಗಿ ಅಡ್ಡಬಿದ್ದು ಪ್ರಾರ್ಥಿ ಸುತ್ತಾ--ಓ ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ; ಆದಾಗ್ಯೂ ನನ್ನ ಚಿತ್ತದಂತಲ್ಲ; ನಿನ್ನ ಚಿತ್ತದಂತೆಯೇ ಆಗಲಿ ಅಂದನು.
TSK
TSK · ಅಪೊಸ್ತಲರ ಕೃತ್ಯಗ 18:21
مراجع Treasury of Scripture Knowledge في Kannada KJV.
ಏನಂದರೆ ವಿಗ್ರಹಗಳಿಗೆ ಅರ್ಪಿಸಿದ ಭೋಜನ ಪದಾರ್ಥಗಳನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದವುಗಳನ್ನೂ ಜಾರತ್ವವನ್ನೂ ನೀವು ವಿಸರ್ಜಿಸಬೇಕೆಂಬದೇ. ಇವುಗಳಿಂದ ನಿಮ್ಮನ್ನು ನೀವು ಕಾಪಾಡಿಕೊಂಡರೆ ನಿಮಗೆ ಒಳ್ಳೇದಾಗುವದು. ನಿಮಗೆ ಶುಭವಾಗಲಿ.
ಯಾಕಂದರೆ ಪೌಲನು ತನಗೆ ಸಾಧ್ಯವಾದರೆ ಪಂಚಾಶತ್ತಮದ ದಿವಸ ಯೆರೂಸಲೇಮಿನಲ್ಲಿರಬೇಕೆಂದು ಅವಸರ ಪಡುತ್ತಾ ಇದ್ದದರಿಂದ ಆಸ್ಯದಲ್ಲಿ ಕಾಲವನ್ನು ಕಳೆಯು ವದಕ್ಕೆ ಮನಸ್ಸಿಲ್ಲದೆ ಸಮುದ್ರ ಪ್ರಯಾಣವಾಗಿ ಎಫೆಸವನ್ನು ದಾಟಿಹೋಗಬೇಕೆಂದು ತೀರ್ಮಾನಿಸಿ ಕೊಂಡಿದ್ದನು.
ಕೊನೆಯದಾಗಿ ನಾನು ನಿಮ್ಮ ಬಳಿಗೆ ಹೇಗಾದರೂ ಬರುವದಕ್ಕೆ ದೇವರ ಚಿತ್ತದಿಂದ ನನ್ನ ಪ್ರಯಾಣವು ಸಫಲವಾಗುವಂತೆ ಬೇಡಿಕೊಳ್ಳುತ್ತೇನೆ.
ಆದರೆ ಕರ್ತನ ಚಿತ್ತವಿದ್ದರೆ ನಾನು ಬೇಗ ನಿಮ್ಮ ಬಳಿಗೆ ಬಂದು ಉಬ್ಬಿಕೊಂಡಿ ರುವವರ ಮಾತನ್ನಲ್ಲ, ಅವರ ಶಕ್ತಿಯನ್ನೇ ಗೊತ್ತು ಮಾಡಿಕೊಳ್ಳುವೆನು.
ಕಡೇ ಮಾತೇನಂದರೆ ಸಹೋದರರೇ, ನಿಮಗೆ ಶುಭವಾಗಲಿ. ಸಂಪೂರ್ಣರಾಗಿರ್ರಿ; ಆದರಣೆ ಹೊಂದಿದವರಾಗಿರ್ರಿ, ಒಂದೇ ಮನಸ್ಸುಳ್ಳವರಾಗಿರ್ರಿ, ಸಮಾಧಾನದಲ್ಲಿ ಜೀವಿಸಿರಿ; ಆಗ ಪ್ರೀತಿಯುಳ್ಳ ಶಾಂತಿಯ ದೇವರು ನಿಮ್ಮ ಸಂಗಡ ಇರುವನು.
ದೇವರ ಚಿತ್ತವಾದರೆ ಹೀಗೆ ಮಾಡುವೆವು.
ಕೆಟ್ಟ ನಡತೆಯುಳ್ಳವರಾಗಿ ಬಾಧೆಪಡುವದಕ್ಕಿಂತ ಒಳ್ಳೇನಡತೆಯುಳ್ಳವರಾಗಿಯೇ ದೇವರ ಚಿತ್ತವಿದ್ದರೆ ಬಾಧೆಪಡುವದು ಲೇಸು.