ನನ್ನಿಂದಾಗುವ ಇವುಗಳಿಂದ ನೀವು ಶಿಕ್ಷಿತರಾಗದೆ ನನಗೆ ವಿರೋಧವಾಗಿ ನಡೆದರೆ
TSK
TSK · ದಾನಿಯೇಲನು 9:13
مراجع Treasury of Scripture Knowledge في Kannada KJV.
ಆದಾಗ್ಯೂ ಕರ್ತನು ನಿಮಗೆ ಇಂದಿನ ವರೆಗೂ ತಿಳುಕೊಳ್ಳುವ ಹೃದಯ ವನ್ನೂ ನೋಡುವ ಕಣ್ಣುಗಳನ್ನೂ ಕೇಳುವ ಕಿವಿಗಳನ್ನೂ ಕೊಡಲಿಲ್ಲ.
ಹೃದಯದಲ್ಲಿ ಕಪಟ ಇರು ವವರು ಕೋಪವನ್ನು ಕೂಡಿಸುತ್ತಾರೆ. ಆತನು ಅವರನ್ನು ಬಂಧಿಸಿದರೆ ಅವರು ಮೊರೆಯಿಡುವದಿಲ್ಲ.
ನನ್ನ ಕಣ್ಣುಗಳನ್ನು ತೆರೆ; ಆಗ ನಿನ್ನ ನ್ಯಾಯಪ್ರಮಾಣದಲ್ಲಿನ ಅದ್ಭುತಗಳನ್ನು ನೋಡುವೆನು.
ನಿನ್ನ ಕೈಗಳು ನನ್ನನ್ನು ರೂಪಿಸಿ ನಿರ್ಮಿಸಿದವು; ನಿನ್ನ ಆಜ್ಞೆಗಳನ್ನು ಕಲಿತುಕೊಳ್ಳುವ ಹಾಗೆ ಗ್ರಹಿಕೆಯನ್ನು ನನಗೆ ಕೊಡು.
ಇಗೋ, ಹಿಂದಿನವುಗಳು ನೆರವೇರಿವೆ. ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ; ಅವು ಹುಟ್ಟುವದಕ್ಕಿಂತ ಮುಂಚೆಯೇ ನಾನು ಅವುಗಳನ್ನು ನಿಮಗೆ ತಿಳಿಸುತ್ತೇನೆ.
ನಾವೆಲ್ಲರೂ ಅಶುದ್ದವಾದದ್ದರ ಹಾಗೆ ಇದ್ದೇವೆ; ನಮ್ಮ ನೀತಿ ಕಾರ್ಯಗಳು ಮೈಲಿಗೆ ವಸ್ತ್ರದ ಹಾಗಿವೆ; ನಾವೆಲ್ಲರೂ ಎಲೆಯ ಹಾಗೆ ಬಾಡುತ್ತೇವೆ; ನಮ್ಮ ಅಕ್ರಮಗಳು ಗಾಳಿಯಂತೆ ನಮ್ಮನ್ನು ಎತ್ತಿಕೊಂಡು ಹೋಗಿವೆ.
ನಾನು ನಿಮ್ಮ ಮಕ್ಕಳನ್ನು ಹೊಡೆದದ್ದು ವ್ಯರ್ಥವಾಯಿತು. ಅವರು ಶಿಕ್ಷೆಯನ್ನು ತಕ್ಕೊಳ್ಳಲಿಲ್ಲ. ನಿಮ್ಮ ಸ್ವಂತ ಕತ್ತಿಯು ನಾಶಮಾಡುವ ಸಿಂಹದಂತೆ ನಿಮ್ಮ ಪ್ರವಾದಿಗಳನ್ನು ನುಂಗಿಬಿಟ್ಟಿವೆ.
ನಿನ್ನನ್ನು ಪ್ರೀತಿ ಮಾಡುವವರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ, ನಿನ್ನನ್ನು ಹುಡುಕುವದಿಲ್ಲ; ನಿನ್ನ ಅಕ್ರಮಗಳು ಬಹಳವೂ ನಿನ್ನ ಪಾಪಗಳು ಪ್ರಬಲವೂ ಆಗಿರುವದರಿಂದ ಶತ್ರುವಿನ ಗಾಯದಿಂದಲೂ ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ.
ನೀವು ಧೂಪಸುಟ್ಟು ಕರ್ತನಿಗೆ ವಿರೋಧವಾಗಿ ಪಾಪ ಮಾಡಿ ಕರ್ತನ ಶಬ್ದವನ್ನು ಕೇಳದೆ ಆತನ ನ್ಯಾಯಪ್ರಮಾಣ ದಲ್ಲಾದರೂ ಆತನ ನಿಯಮಗಳಲ್ಲಾದರೂ ಆತನ ಸಾಕ್ಷಿಗಳಲ್ಲಾದರೂ ನಡೆದು ವಿಧೇಯರಾಗದೆ ಇದದರಿಂದ ಈ ಕೇಡು ಈ ದಿನ ಇರುವ ಹಾಗೆ ನಿಮಗೆ ಸಂಭವಿಸಿದೆ.
ದಾರಿಯಲ್ಲಿ ಹೋಗುವವ ರೆಲ್ಲರೂ ನಿನ್ನ ವಿಷಯದಲ್ಲಿ ತಮ್ಮ ಕೈಗಳನ್ನು ತಟ್ಟುತ್ತಾರೆ; ಅವರು ಯೆರೂಸಲೇಮಿನ ಕುಮಾರ್ತೆಯ ವಿಷಯದಲ್ಲಿ ಸಿಳ್ಳು ಹಾಕಿ ತಲೆಯಾಡಿಸಿ--ಆ ಮನುಷ್ಯರು ಕರೆಯು ತ್ತಿದ್ದ ಸೌಂದರ್ಯದ ಸಂಪೂರ್ಣತೆಯೂ ಸರ್ವ ಭೂಮಿಯ ಸಂತೋಷವೂ ಆಗಿರುವ ನಗರಿಯು ಇದೇಯೋ?
ನೀನು ನಿನ್ನ ಯೌವನ ದಿವಸಗಳನ್ನು ಜ್ಞಾಪಕಮಾಡಿಕೊಳ್ಳದೆ ಈ ಸಂಗತಿಗಳಿಂದ ನೀನು ನನಗೆ ಬೇಸರಪಡಿಸಿದ್ದರಿಂದ ಇಗೋ, ನಾನು ಸಹ ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು ಎಂದು ದೇವರಾದ ಕರ್ತನು ಹೇಳುತ್ತಾನೆ. ನಿನ್ನ ಎಲ್ಲಾ ಅಸಹ್ಯವಾದವುಗಳ ಮೇಲೆ ಈ ಅಪವಿತ್ರತೆಯನ್ನು ನೀನು ಮಾಡಬಾರದು.
ಅವರೆಲ್ಲರೂ ಒಲೆಯ ಹಾಗೆ ಬಿಸಿಯಾಗಿದ್ದಾರೆ; ತಮ್ಮ ನ್ಯಾಯಾ ಧಿಪತಿಗಳನ್ನು ನುಂಗಿಬಿಟ್ಟಿದ್ದಾರೆ; ಅವರ ಅರಸುಗಳೆಲ್ಲಾ ಬಿದ್ದು ಹೋಗಿದ್ದಾರೆ; ಅವರಲ್ಲಿ ಒಬ್ಬನಾದರೂ ನನ್ನನ್ನು ಪ್ರಾರ್ಥಿಸುವದೇ ಇಲ್ಲ.
ತಮ್ಮ ಹಾಸಿಗೆಯ ಮೇಲೆ ಗೋಳಾಡುವಾಗಲೂ ಅವರು ತಮ್ಮ ಹೃದಯದಿಂದ ನನ್ನನ್ನು ಕೂಗಲಿಲ್ಲ; ಕಾಳು ಮತ್ತು ದ್ರಾಕ್ಷಾರಸಗಳ ನಿಮಿತ್ತ ಕೂಡಿ ಬಂದು ನನಗೆ ವಿರುದ್ಧವಾಗಿ ತಿರುಗಿ ಬಿದ್ದಿದ್ದಾರೆ.
ಅವರೆಲ್ಲರು ದೇವರಿಂದ ಬೋಧಿಸಲ್ಪಡುವರೆಂದು ಪ್ರವಾದನೆಗಳಲ್ಲಿ ಬರೆಯಲ್ಪಟ್ಟಿದೆ. ಆದಕಾರಣ ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬ ಮನುಷ್ಯನು ನನ್ನ ಬಳಿಗೆ ಬರುತ್ತಾನೆ.
ಹಾಗಾದರೆ ದೇವರವಾಕ್ಯವನ್ನು ಹೊಂದಿದವರು ದೇವರುಗಳೆಂದು ಆತನು ಕರೆದಿರುವಲ್ಲಿ ಬರಹವು ವ್ಯರ್ಥವಾಗಲಾರದಷ್ಟೆ.
ಆತನನ್ನೇ ಕೇಳಿದಿರಲ್ಲಾ, ಆತನಲ್ಲಿಯೇ ಉಪದೇಶ ವನ್ನು ಹೊಂದಿದಿರಲ್ಲಾ.