ಚೀಯೋನ್ ಕುಮಾರಿಯು ದ್ರಾಕ್ಷೇತೋಟ ದಲ್ಲಿರುವ ಗುಡಿಸಲಿನ ಹಾಗೆಯೂ ಸೌತೆಯ ತೋಟ ದಲ್ಲಿರುವ ಮನೆಯ ಹಾಗೆಯೂ ಮುತ್ತಿಗೆ ಹಾಕಲಟ್ಟಿರುವ ಪಟ್ಟಣದ ಹಾಗೆಯೂ ಬಿಡಲ್ಪಟ್ಟಿದ್ದಾಳೆ.
TSK
TSK · ಯೆಶಾಯ 49:21
مراجع Treasury of Scripture Knowledge في Kannada KJV.
ಆದಕಾರಣ ನನ್ನ ಪ್ರಜೆಯು ಜ್ಞಾನಹೀನರಾದದರಿಂದ ಅವರು ಸೆರೆಗೆ ಹೋದರು; ಅವರ ಘನವಂತರು ಹಸಿಯು ವರು, ಹಾಗೆ ಜನಸಮೂಹವು ಬಾಯಾರಿಕೆಯಿಂದ ಒಣಗುವದು.
ಓ ಯೆರೂಸ ಲೇಮೇ, ಧೂಳನ್ನು ಝಾಡಿಸಿಕೋ; ಎದ್ದು ಕೂತು ಕೋ, ಓ ಸೆರೆಯಾದ ಚೀಯೋನ್ ಕುಮಾರಿಯೇ, ನಿನ್ನ ಕುತ್ತಿಗೆಯ ಪಾಶಗಳನ್ನು ಬಿಚ್ಚಿಕೋ.
ಹಾದುಹೋಗುವವರಿಲ್ಲದೆ ನೀನು ಬಿಡಲ್ಪಟ್ಟವಳೂ ಹಗೆ ಮಾಡಲ್ಪಟ್ಟವಳೂ ಆಗಿ ದ್ದಕ್ಕೆ ಬದಲಾಗಿ ನಿನ್ನನ್ನು ನಿತ್ಯವಾದ ಘನತೆಯೂ ಅನೇಕ ಸಂತತಿಗಳಲ್ಲಿ ಉಲ್ಲಾಸವಾಗಿಯೂ ಮಾಡು ತ್ತೇನೆ.
ನಿನ್ನ ಪರಿಶುದ್ಧ ಪಟ್ಟಣಗಳು ಅಡವಿ ಯಾದವು; ಚೀಯೋನು ಅಡವಿಯಾಯಿತು; ಯೆರೂ ಸಲೇಮು ಹಾಳಾಯಿತು.
¶ ಜನಭರಿತವಾಗಿದ್ದ ನಗರಿಯು ಹೇಗೆ ಒಂಟಿಯಾಗಿ ಕೂತುಕೊಂಡಿದ್ದಾಳೆ! ಅವಳು ಹೇಗೆ ವಿಧವೆಯಾದಳು! ಜನಾಂಗಗಳಲ್ಲಿ ಶ್ರೇಷ್ಠಳಾದವಳೂ ಸಂಸ್ಥಾನಗಳಲ್ಲಿ ರಾಜಕುಮಾರಿಯಾಗಿದ್ದವಳೂ ಹೇಗೆ ಕಪ್ಪವನ್ನು ಕೊಡುವಂಥವಳಾದಳು!
ಇದಲ್ಲದೆ ಅವರು ಕತ್ತಿಯ ಬಾಯಿಗೆ ಬೀಳುವರು. ಸೆರೆಯಾಗಿ ಎಲ್ಲಾ ಜನಾಂಗಗಳಲ್ಲಿ ಒಯ್ಯ ಲ್ಪಡುವರು;ಅನ್ಯಜನಗಳ ಕಾಲಗಳು ಪರಿಪೂರ್ಣ ವಾಗುವ ವರೆಗೆ ಯೆರೂಸಲೇಮು ಅನ್ಯಜನಗಳಿಂದ ತುಳಿದಾಡಲ್ಪಡುವದು.
ಹುಟ್ಟು ಕಾಡು ಮರದಿಂದ ಕಡಿದು ತೆಗೆಯಲ್ಪಟ್ಟಿರುವ ನೀನು ನಿನಗೆ ಸಂಬಂಧಪಡದ ಊರುಮರದಲ್ಲಿ ಕಸಿಕಟ್ಟಿಸಿಕೊಂಡವ ನಾದ ಮೇಲೆ ಅದರಲ್ಲಿ ಹುಟ್ಟಿದ ಕೊಂಬೆಗಳಾಗಿರುವ ಅವರು ಸ್ವಂತ ಮರದಲ್ಲಿ ಕಸಿಕಟ್ಟಲ್ಪಡುವದು ಎಷ್ಟೋ ಸಹಜವಾಗಿದೆಯಲ್ಲವೇ.
ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.