TSK

TSK · ಙ್ಞಾನೋಕ್ತಿಗಳು 19:10

مراجع Treasury of Scripture Knowledge في Kannada KJV.

العودة إلى المقطع

ತರುವಾಯ ಅಬೀಗೈಲಳು ನಾಬಾಲನ ಬಳಿಗೆ ಬಂದಾಗ ಇಗೋ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸ ಗೊಂಡಿತ್ತು. ಆದಕಾರಣ ಅವಳು ಉದಯವಾಗುವ ವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ ಹೆಚ್ಚಾದದ್ದ ನ್ನಾಗಲಿ ತಿಳಿಸಲಿಲ್ಲ.

ನಾನು ಅರಸನಾಗಿ ಅಭಿಷೇಕಿಸ ಲ್ಪಟ್ಟಿದ್ದರೂ ಇಂದಿಗೆ ದುರ್ಬಲನಾಗಿದ್ದೇನೆ. ಚೆರೂಯಳ ಕುಮಾರ ರಾದ ಈ ಮನುಷ್ಯರು ನನಗೆ ಕಠಿಣರಾಗಿದ್ದಾರೆ. ಕೆಟ್ಟತನ ಮಾಡುವವನಿಗೆ ಕರ್ತನು ಅವನ ಕೆಟ್ಟತನಕ್ಕೆ ಸರಿಯಾಗಿ ಪ್ರತಿಫಲ ಕೊಡುವನು ಅಂದನು.

ಬುದ್ಧಿಹೀನನಿಗೆ ಉತ್ತಮವಾದ ನುಡಿಯುಕ್ತ ವಲ್ಲ; ರಾಜಪುತ್ರನಿಗೆ ಸುಳ್ಳಾಡುವ ತುಟಿಗಳು ಇನ್ನೂ ಎಷ್ಟೋ ಹೆಚ್ಚಾಗಿ ಯುಕ್ತವಲ್ಲ.

ಆಳುವ ವನ ಸಮ್ಮುಖದಿಂದ ಹೊರಟು ಬರುವ ತಪ್ಪಿನ ಹಾಗಿ ರುವ ಒಂದು ಕೇಡನ್ನು ನಾನು ಸೂರ್ಯನ ಕೆಳಗೆ ನೋಡಿದ್ದೇನೆ.

ಪ್ರತಿಯೊಬ್ಬನು ಇನ್ನೊಬ್ಬ ನಿಂದಲೂ ಪ್ರತಿಯೊಬ್ಬನು ನೆರೆಯವನಿಂದಲೂ ಜನರು ಹಿಂಸಿಸಲ್ಪಡುವರು: ಹುಡುಗನು ವೃದ್ಧನ ವಿರೋಧವಾಗಿಯೂ ನೀಚನು ಘನವಂತನ ವಿರೋಧ ವಾಗಿಯೂ ಸೊಕ್ಕಿನಿಂದ ವರ್ತಿಸುವರು.

ಆ ದಿವಸದಲ್ಲಿ ಸೈನ್ಯಗಳ ದೇವರಾದ ಕರ್ತನು --ಅಳಬೇಕೆಂದು, ದುಃಖಿಸಬೇಕೆಂದು, ತಲೆಬೋಳಿಸಿ ಕೊಳ್ಳಬೇಕೆಂದು, ಗೋಣೀತಟ್ಟನ್ನು ಸುತ್ತಿಕೊಳ್ಳಬೇ ಕೆಂದು ಆತನು ಕರೆದನು.

ಓ ಇಸ್ರಾಯೇಲೇ, ಬೇರೆ ಜನರು ಉಲ್ಲಾ ಸಿಸುವ ಪ್ರಕಾರ ಸಂತೋಷಪಡಬೇಡ; ನಿನ್ನ ದೇವರನ್ನು ನೀನು ಬಿಟ್ಟು ವ್ಯಭಿಚಾರ ಮಾಡಿದ್ದೀ, ಎಲ್ಲಾ ಧಾನ್ಯದ ಕಣಗಳಲ್ಲಿ ಕೂಲಿಯನ್ನು ಪ್ರೀತಿ ಮಾಡಿದ್ದೀ.

ಊದಾಬಣ್ಣದ ವಸ್ತ್ರಗಳನ್ನೂ ನಯವಾದ ನಾರು ಮಡಿಯನ್ನೂ ಧರಿಸಿಕೊಂಡು ಪ್ರತಿದಿನವೂ ಸಮೃದ್ಧಿ ಯಾಗಿ ಭೋಜನಮಾಡುತ್ತಿದ್ದ ಒಬ್ಬಾನೊಬ್ಬ ಐಶ್ವರ್ಯ ವಂತನಿದ್ದನು.

ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗೆಯು ದುಃಖಕ್ಕೂ ನಿಮ್ಮ ಸಂತೋಷವು ವ್ಯಥೆಗೂ ತಿರುಗಿಕೊಳ್ಳಲಿ.