TSK

TSK · ಙ್ಞಾನೋಕ್ತಿಗಳು 19:17

مراجع Treasury of Scripture Knowledge في Kannada KJV.

العودة إلى المقطع

ಬಡವರು ದೇಶದಲ್ಲಿ ಇಲ್ಲದೆ ಹೋಗುವದಿಲ್ಲ: ಆದದರಿಂದನಿನ್ನ ಸಹೋದರನಿಗೂ ದರಿದ್ರನಿಗೂ ಬಡವನಿಗೂ ದೇಶದಲ್ಲಿ ನಿನ್ನ ಕೈಯನ್ನು ವಿಶಾಲವಾಗಿ ತೆರೆಯ ಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ.

ಕರ್ತನು ಅವನನ್ನು ಕಾಪಾಡಿ ಜೀವದಲ್ಲಿಡುವನು; ಅವನು ಭೂಮಿಯಲ್ಲಿ ಧನ್ಯನಾಗಿ ರುವನು; ನೀನು ಅವನ ಶತ್ರುಗಳ ಇಷ್ಟಕ್ಕೆ ಅವನನ್ನು ಒಪ್ಪಿಸದೆ ಇರುವಿ.

ತನ್ನ ಬಾಯಿಯ ಫಲದ ಮುಖಾಂತರ ಒಬ್ಬ ಮನುಷ್ಯನು ಒಳ್ಳೆಯದ ರಿಂದ ತೃಪ್ತನಾಗುವನು; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.

ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನನ್ನು ಹೀನೈಸುವನು; ಆತನನ್ನು ಸನ್ಮಾನಿಸುವವನು ಬಡವರನ್ನು ಕನಿಕರಿಸುತ್ತಾನೆ.

ಬಡವರಿಗೆ ದಾನಮಾಡು ವವರು ಕೊರತೆಪಡುವದಿಲ್ಲ; ತನ್ನ ಕಣ್ಣುಗಳನ್ನು ಮುಚ್ಚಿ ಕೊಳ್ಳುವವನಿಗೆ ಅನೇಕ ಶಾಪಗಳು.

ನಿನ್ನ ರೊಟ್ಟಿಯನ್ನು ಹಸಿದವರಿಗೆ ಹಂಚುವದೂ ಅಲೆಯು ತ್ತಿರುವ ಬಡವರನ್ನು ನಿನ್ನ ಮನೆಗೆ ಬರಮಾಡಿ ಕೊಳ್ಳುವದೂ ಬೆತ್ತಲೆಯವರನ್ನು ಕಂಡಾಗೆಲ್ಲ ಅವರಿಗೆ ಹೊದಿಸುವದೂ ನಿನ್ನ ಸ್ವಂತ ಶರೀರದಂತಿರುವವ ನಿಗೆ ನಿನ್ನನ್ನು ಮರೆಮಾಡಿಕೊಳ್ಳದಿರುವದೂ ಇದೇ ಅಲ್ಲವೋ?

ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.

ಆದರೆ--ಸ್ವಲ್ಪವಾಗಿ ಬಿತ್ತುವವನು (ಪೈರನ್ನು) ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿಯೇ ಕೊಯ್ಯುವನು ಎಂದು ನಾನು ಹೇಳು ತ್ತೇನೆ.

ನೀವು ಪರಿಶುದ್ಧರಿಗೆ ಉಪಚಾರ ಮಾಡಿದಿರಿ, ಇನ್ನು ಮಾಡುತ್ತಾ ಇದ್ದೀರಿ. ಈ ನಿಮ್ಮ ಕೆಲಸವನ್ನೂ ಇದರಲ್ಲಿ ನೀವು ಆತನ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯ ಪ್ರಯಾಸವನ್ನೂ ಮರೆಯು ವದಕ್ಕೆ ದೇವರು ಅನ್ಯಾಯಸ್ಥನಲ್ಲ.