TSK

TSK · ಧರ್ಮೋಪದೇಶಕಾಂಡ 2:36

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

ಅಂತು ಅರ್ನೋನ್ ತಗ್ಗಿನ ಅಂಚಿನಲ್ಲಿರುವ ಅರೋಯೇರ್ ಪಟ್ಟಣ ಮೊದಲುಗೊಂಡು ಹೆರ್ಮೋನ್ ಎಂಬ ಸೀಯೋನ್ ಪರ್ವತದವರೆಗೂ ಮತ್ತು

ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾಗಿದ್ದವನು ಸೀಹೋನ್. ಇವನು ಅರ್ನೋನ್ ಕಣಿವೆಯ ಅಂಚಿನಲ್ಲಿರುವ ಅರೋಯೇರ್ ಪಟ್ಟಣವು ಮತ್ತು ಕಣಿವೆಯಲ್ಲಿಯೇ ಇದ್ದ ಪಟ್ಟಣಗಳು ಇವುಗಳು ಮೊದಲುಗೊಂಡು ಅಮ್ಮೋನಿಯರ ಮೇರೆಯಾಗಿರುವ ಯಬ್ಬೋಕ್ ಹೊಳೆಯವರೆಗಿರುವ ಗಿಲ್ಯಾದಿನ ಅರ್ಧಪ್ರಾಂತ್ಯವು

ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣ;

ಇಸ್ರಾಯೇಲರು ಮುನ್ನೂರು ವರ್ಷಗಳಿಂದ ಹೆಷ್ಬೋನ್, ಅರೋಯೇರ್ ಎಂಬ ಪಟ್ಟಣಗಳಲ್ಲಿಯೂ, ಅವುಗಳ ಗ್ರಾಮಗಳಲ್ಲಿಯೂ, ಅರ್ನೋನ್ ತೀರದ ಎಲ್ಲಾ ಪಟ್ಟಣಗಳಲ್ಲಿಯೂ ವಾಸಿಸುತ್ತಿದ್ದಾರಲ್ಲಾ. ಇಷ್ಟು ದಿನಗಳವರೆಗೆ ನೀನು ಅದನ್ನು ಬಿಡಿಸಿಕೊಳ್ಳದೆ ಇದ್ದದ್ದೇಕೆ?

ಆರೋಯೇರಿನ ಪಟ್ಟಣಗಳು ನಿರ್ಜನವಾಗಿ, ಮಂದೆಗಳಿಗೆ ಆಸರೆಯಾಗುವವು. ಅವು ಯಾರ ಹೆದರಿಕೆಯೂ ಇಲ್ಲದೆ ಅಲ್ಲಿ ತಂಗುವವು.

ಅರೋಯೇರಿನವರೇ, ದಾರಿಯ ಮಗ್ಗುಲಲ್ಲಿ ನಿಂತುಕೊಂಡು ನೋಡಿರಿ; ಓಡಿಹೋಗುವವನನ್ನೂ ಮತ್ತು ತಪ್ಪಿಸಿಕೊಳ್ಳುವವಳನ್ನೂ ‘ಏನಾಯಿತು?’ ಎಂದು ವಿಚಾರಿಸಿರಿ.