TSK

TSK · ವಿಮೋಚನಕಾಂಡ 28:37

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

ಅವರು ಮಾಡಬೇಕಾದ ವಸ್ತ್ರಗಳು ಯಾವುವೆಂದರೆ; ಎದೆಯ ಪದಕದ ಚೀಲ, ಏಫೋದ್, ನಿಲುವಂಗಿ, ಕಸೂತಿ ಕೆಲಸದ ಮೇಲಂಗಿ, ಮುಂಡಾಸ ಹಾಗೂ ನಡುಕಟ್ಟು ಇವುಗಳೇ. ನಿನ್ನ ಸಹೋದರನಾದ ಆರೋನನೂ ಅವನ ಮಕ್ಕಳೂ ನನ್ನ ಯಾಜಕರಾಗುವುದಕ್ಕೆ ಅವರಿಗೋಸ್ಕರ ಈ ದೀಕ್ಷಾವಸ್ತ್ರಗಳನ್ನು ಮಾಡಿಸಬೇಕು.

¶ ಮಹಾಯಾಜಕನು ಏಫೋದ್ ಕವಚದ ಸಂಗಡ ಧರಿಸಿಕೊಳ್ಳಬೇಕಾದ ಮೇಲಂಗಿಯನ್ನು ನೀನು ನೀಲಿಬಣ್ಣದ ಬಟ್ಟೆಯಿಂದಲೇ ಮಾಡಿಸಬೇಕು.

¶ ಅವರು ಚೊಕ್ಕ ಬಂಗಾರದಿಂದ ಪರಿಶುದ್ಧ ಕಿರೀಟಕ್ಕೆ ಬಾಸಿಂಗವನ್ನು ಮಾಡಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ ಅದರಲ್ಲಿ, ಯೆಹೋವನಿಗೆ ಮೀಸಲು ಎಂಬ ಲಿಪಿಯನ್ನು ಬರೆದರು.

“ನೀನು ಇಸ್ರಾಯೇಲರ ಸಂತತಿಯವರ ಸಂಗಡ ಮಾತನಾಡಿ, ಅವರು ತಮ್ಮ ವಸ್ತ್ರಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು, ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿ ದಾರದಿಂದ ಕಟ್ಟಿರಬೇಕು ಎಂದು ಅವರಿಗೆ ಆಜ್ಞಾಪಿಸು.