¶ ದೇವರು ನೋಹನನ್ನೂ, ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ, “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.
TSK
TSK · ಆದಿಕಾಂಡ 24:60
Treasury of Scripture Knowledge references in ಕನ್ನಡ IRV.
ನಾನು ಆಕೆಯನ್ನು ಆಶೀರ್ವದಿಸಿ, ಆಕೆಯಿಂದ ನಿನಗೆ ಒಬ್ಬ ಮಗನನ್ನು ಕೊಡುವೆನು. ನಾನು ಆಕೆಯನ್ನು ಆಶೀರ್ವದಿಸಿದ್ದರಿಂದ ಆಕೆಯಿಂದ ಅನೇಕ ಜನಾಂಗಗಳೂ ಅರಸರೂ ಉತ್ಪತ್ತಿಯಾಗುವರು” ಎಂದು ಹೇಳಿದನು.
ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ ನಿನಗೆ ಬಹಳ ಸಂತತಿಯನ್ನು ಕೊಟ್ಟು ನಿನ್ನಿಂದ ಅನೇಕ ಜನಾಂಗಗಳು ಹುಟ್ಟುವಂತೆ ಅನುಗ್ರಹಿಸಲಿ.
¶ ನಂತರ ಅವನು ಯೋಸೇಫನನ್ನು, ಆಶೀರ್ವದಿಸಿ, “ನನ್ನ ಪೂರ್ವಿಕರಾದ ಅಬ್ರಹಾಮ ಇಸಾಕರು ಸೇವಿಸಿದ ದೇವರೇ, ನನ್ನನ್ನು ಚಿಕ್ಕಂದಿನಿಂದ ಈ ದಿನದ ವರೆಗೂ ಪರಾಂಬರಿಸುತ್ತಾ ಬಂದ ದೇವರು,
ನೀವು ಅಂಥವರನ್ನು ಸ್ವಾಧೀನಪಡಿಸಿಕೊಂಡು ನಿಮ್ಮ ತರುವಾಯ ನಿಮ್ಮ ಸಂತತಿಯವರಿಗೆ ಸ್ವತ್ತಾಗಿ ಕೊಟ್ಟು ಬಿಡಬಹುದು. ಅವರನ್ನು ಶಾಶ್ವತ ದಾಸರನ್ನಾಗಿ ಮಾಡಿಕೊಳ್ಳಬಹುದು. ಇಸ್ರಾಯೇಲರಾದ ನೀವಾದರೋ ಎಲ್ಲರೂ ಸಹೋದರರಾಗಿರುವುದರಿಂದ ಒಬ್ಬರಿಂದ ಒಬ್ಬರು ಕಠಿಣವಾಗಿ ಸೇವೆಮಾಡಿಸಿಕೊಳ್ಳಬಾರದು.
ಅದಕ್ಕೆ ಊರ ಬಾಗಿಲಲ್ಲಿ ಕೂಡಿ ಬಂದಿದ್ದ ಹಿರಿಯರೂ, ಎಲ್ಲಾ ಜನರೂ “ಹೌದು, ನಾವೇ ಸಾಕ್ಷಿಗಳು; ಯೆಹೋವನು ಇಸ್ರಾಯೇಲನ ಮನೆಯನ್ನು ಕಟ್ಟಿದ. ರಾಹೇಲ್, ಲೇಯಾ ಎಂಬ ಸ್ತ್ರೀಯರನ್ನು ಹೇಗೋ ಹಾಗೆಯೇ ನಿನ್ನ ಮನೆಗೆ ಬರುವ ಈ ಸ್ತ್ರೀಯನ್ನೂ ಅಭಿವೃದ್ಧಿಪಡಿಸಲಿ. ಎಫ್ರಾತದಲ್ಲಿ ಅಭಿವೃದ್ಧಿ ಹೊಂದು, ಬೇತ್ಲೆಹೇಮಿನಲ್ಲಿ ಪ್ರಸಿದ್ಧನಾಗು.
ನ್ಯಾಯಾಸನದ ಮುಂದೆ ಉರಿಯ ಪ್ರವಾಹವು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ ದೂತರು ಆತನ ಸೇವೆಗೆ ಸಿದ್ಧರಾಗಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತುಕೊಂಡಿದ್ದರು. ನ್ಯಾಯಸಭೆಯವರು ಕುಳಿತುಕೊಂಡರು, ಪುಸ್ತಕಗಳು ತೆರೆಯಲ್ಪಟ್ಟವು.