ಮಾರ್ಕನು 9:34
TSK
ಆದರೆ ಅವರು ಸುಮ್ಮನಿದ್ದರು; ಏಕೆಂದರೆ ಅವರು ದಾರಿಯಲ್ಲಿ ಒಬ್ಬರನ್ನೊಬ್ಬರು, ತಮ್ಮಲ್ಲಿ ಯಾರು ಹೆಚ್ಚಿನವನೆಂದು ವಾಗ್ವಾದಮಾಡಿಕೊಂಡಿದ್ದರು.
TSK
Treasury of Scripture Knowledge references in ಕನ್ನಡ IRV.
ಆದರೆ ಅವರು ಸುಮ್ಮನಿದ್ದರು; ಏಕೆಂದರೆ ಅವರು ದಾರಿಯಲ್ಲಿ ಒಬ್ಬರನ್ನೊಬ್ಬರು, ತಮ್ಮಲ್ಲಿ ಯಾರು ಹೆಚ್ಚಿನವನೆಂದು ವಾಗ್ವಾದಮಾಡಿಕೊಂಡಿದ್ದರು.
¶ ತರುವಾಯ ಶಿಷ್ಯರೊಳಗೆ, ತಮ್ಮಲ್ಲಿ ಯಾವನು ಹೆಚ್ಚಿನವನು ಎಂಬ ವಿಚಾರಹುಟ್ಟಿತು.
¶ ಪ್ರೀತಿಯು ಬಹು ತಾಳ್ಮೆಯುಳ್ಳದ್ದು, ದಯೆಯುಳ್ಳದ್ದು. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ. ಅದು ಗರ್ವಪಡುವುದಿಲ್ಲ, ಅಸಭ್ಯವಾಗಿ ನಡೆಯುವುದಿಲ್ಲ.
ದೇವರು ನಮ್ಮಲ್ಲಿ ಇರಿಸಿರುವ ಪವಿತ್ರಾತ್ಮನು ಅಭಿಮಾನತಾಪದಿಂದ ನಮಗೋಸ್ಕರ ಹಂಬಲಿಸುತ್ತಾನೆಂಬ ವೇದೋಕ್ತಿ ಬರಿ ಮಾತೆಂದು ನೀವು ಭಾವಿಸುತ್ತೀರೋ?