“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನಿಮಗೆ ಸಂಪೂರ್ಣ ವಿರಾಮವಿರಬೇಕು. ಅದನ್ನು ತುತ್ತೂರಿಗಳ ಧ್ವನಿಯಿಂದ ಪ್ರಕಟಪಡಿಸಬೇಕು. ದೇವಾರಾಧನೆಗಾಗಿ ಸಭೆಸೇರಬೇಕು.
TSK
TSK · ನೆಹೆಮಿಯ 8:2
Treasury of Scripture Knowledge references in ಕನ್ನಡ IRV.
¶ ಅವನು ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆಮಾಡುವ ಲೇವಿಯರ ವಶದಲ್ಲಿರುವ ಈ ಧರ್ಮಶಾಸ್ತ್ರಗ್ರಂಥದ ಒಂದು ಪ್ರತಿಯನ್ನು ತನಗೋಸ್ಕರ ಪುಸ್ತಕರೂಪವಾಗಿ ಬರೆಯಿಸಿಕೊಳ್ಳಬೇಕು.
ಮೋಶೆಯು ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಹೆಂಗಸರಿಗೂ, ಚಿಕ್ಕವರಿಗೂ, ಪರದೇಶದವರಿಗೂ ಕೇಳಿಸುವಂತೆ ಸರ್ವಸಮೂಹದ ಮುಂದೆ ಅದನ್ನು ಓದಿದನು.
ಎಜ್ರನು ಮೊದಲನೆಯ ದಿನದಿಂದ ಕೊನೆಯ ದಿನದವರೆಗೆ ಪ್ರತಿದಿನವೂ ದೇವರ ಧರ್ಮನಿಯಮಗಳನ್ನು ಜನರಿಗೋಸ್ಕರ ಪಾರಾಯಣ ಮಾಡುತ್ತಿದ್ದನು. ಏಳು ದಿನಗಳವರೆಗೂ ಉತ್ಸವದ ಜಾತ್ರೆ ನಡೆಯಿತು. ನಿಯಮದ ಪ್ರಕಾರ ಎಂಟನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ ಸೇರಿತು.
¶ ಅಂದು ಜನರ ಮುಂದೆ ಮೋಶೆಯ ಧರ್ಮನಿಯಮಗಳ ಪಾರಾಯಣವು ನಡೆಯುತ್ತಿರಲಾಗಿ, ಅದರಲ್ಲಿ ಅಮ್ಮೋನಿಯರಾಗಲಿ ಹಾಗು ಮೋವಾಬ್ಯರಾಗಲಿ ದೇವರ ಸಭೆಯಲ್ಲಿ ಎಂದಿಗೂ ಪ್ರವೇಶಮಾಡಬಾರದು.
ಜ್ಞಾನಾನುಸಾರವಾಗಿ ಮಾತನಾಡುವುದು ಯಾಜಕನ ತುಟಿಗಳ ಧರ್ಮವಷ್ಟೆ; ಅವನು ಸೇನಾಧೀಶ್ವರನಾದ ಯೆಹೋವನ ದೂತನಾಗಿರುವ ಕಾರಣ ಜನರು ಅವನ ಬಾಯಿಂದ ಧರ್ಮೋಪದೇಶವನ್ನು ಕೇಳುವುದು ಧರ್ಮ. ನೀವೋ ದಾರಿತಪ್ಪಿದ್ದೀರಿ;