TSK

TSK · ಆದಿಕಾಂಡ 21:7

Treasury of Scripture Knowledge references in Kannada KJV.

ಅಂಗೀಕಾರಕ್ಕೆ ಹಿಂತಿರುಗಿ

ಇದಲ್ಲದೆ ಅಬ್ರಹಾಮನೂ ಸಾರಳೂ ದಿನ ಗತಿಸಿದವರಾಗಿ ಮುದುಕರಾಗಿದ್ದರು; ಸಾರಳಿಗೆ ಹೆಂಗಸರಿಗೆ ಆಗುವ ಕ್ರಮವು ನಿಂತುಹೋಗಿತ್ತು.

ನಿನ್ನ ಮುಂದೆ ಇದ್ದ ಪೂರ್ವದ ದಿವಸಗಳನ್ನು ದೇವರು ಭೂಮಿಯ ಮೇಲೆ ಮನುಷ್ಯನನ್ನು ಸೃಷ್ಟಿಸಿ ದಂದಿನಿಂದ ವಿಚಾರಿಸು; ಆಕಾಶದ ಈ ಕಡೆಯಿಂದ ಆ ಕಡೆಯವರೆಗೂ ವಿಚಾರಿಸು; ಇದರಂತೆ ದೊಡ್ಡ ಕಾರ್ಯ ಉಂಟಾಯಿತೇ? ಇಲ್ಲವೆ ಇದರಂತೆ ಕೇಳ ಲ್ಪಟ್ಟಿತೇ?

ತಖ್ಪೆನೇಸ್‌ ಸಹೋದರಿಯು ಅವನಿಗೆ ಗೆನುಬ ತನೆಂಬ ಮಗನನ್ನು ಹೆತ್ತಳು. ತಖ್ಪೆನೇಸ್‌ ಇವನನ್ನು ಫರೋಹನ ಮನೆಯಲ್ಲಿ ಮೊಲೆ ಬಿಡಿಸಿದಳು. ಗೆನುಬತನು ಫರೋಹನ ಮನೆಯಲ್ಲಿ ಅವನ ಮಕ್ಕಳ ಸಂಗಡ ಇದ್ದನು.

ನೀನು ದೊಡ್ಡವನೂ ಅದ್ಭುತಗಳನ್ನು ಮಾಡುವಾತನೂ ಆಗಿದ್ದೀ; ನೀನೊಬ್ಬನೇ ದೇವರು.

ಇಂಥಾದ್ದನ್ನು ಯಾರು ಕೇಳಿದ್ದಾರೆ? ಇಂಥವುಗಳನ್ನು ಯಾರು ನೋಡಿದ್ದಾರೆ? ಭೂಮಿ ಒಂದೇ ದಿವಸದಲ್ಲಿ ಹೆರುವಂತೆ ಮಾಡಿತೇ? ಅಥವಾ ಜನಾಂಗವು ಕ್ಷಣ ಮಾತ್ರದಲ್ಲಿ ಹುಟ್ಟೀತೇ? ಚೀಯೋನು ಪ್ರಸವವೇದನೆ ಪಟ್ಟಾಗಲೇ ತನ್ನ ಮಕ್ಕಳನ್ನು ಹೆತ್ತಳು.

ಆ ದಿನದಲ್ಲಿ ಆತನು ತನ್ನ ಪರಿಶುದ್ಧರಲ್ಲಿ ಮಹಿಮೆ ಹೊಂದುವಂತೆಯೂ ನಂಬುವವರೆಲ್ಲರಲ್ಲಿ ಮೆಚ್ಚಿಕೆ ಹೊಂದುವಂತೆಯೂ ಬರುವನು. (ಯಾಕಂದರೆ ನೀವು ನಮ್ಮ ಸಾಕ್ಷಿಯನ್ನು ನಂಬಿದಿರಿ).