ಅವರು ಮೋಶೆಗೆ--ಐಗುಪ್ತದಲ್ಲಿ ಸಮಾಧಿ ಗಳು ಇಲ್ಲದ ಕಾರಣ ನಾವು ಅರಣ್ಯದಲ್ಲಿ ಸಾಯುವ ಹಾಗೆ ನಮ್ಮನ್ನು ಕರಕೊಂಡು ಬಂದಿಯೋ? ಯಾಕೆ ನೀನು ಈ ಪ್ರಕಾರ ನಮಗೆ ಮಾಡಿ ನಮ್ಮನ್ನು ಐಗುಪ್ತ ದಿಂದ ಕರಕೊಂಡು ಬಂದಿ?
TSK
TSK · ಅರಣ್ಯಕಾಂಡ 21:5
Treasury of Scripture Knowledge references in Kannada KJV.
ಆಗ ಇಸ್ರಾಯೇಲ್ ಮಕ್ಕಳ ಸಭೆಯೆಲ್ಲಾ ಅರಣ್ಯದಲ್ಲಿ ಮೋಶೆಗೂ ಆರೋನನಿಗೂ ವಿರೋಧ ವಾಗಿ ಗುಣುಗುಟ್ಟಿತು.
ಬೆಳಿಗ್ಗೆ ಕರ್ತನ ಮಹಿಮೆ ಯನ್ನು ನೋಡುವಿರಿ; ಕರ್ತನಿಗೆ ವಿರೋಧವಾಗಿ ನೀವು ಗುಣುಗುಟ್ಟಿದ್ದನ್ನು ಆತನು ಕೇಳಿದ್ದಾನೆ; ನಮಗೆ ವಿರೋಧ ವಾಗಿ ನೀವು ಗುಣುಗುಟ್ಟುವ ಹಾಗೆ ನಾವು ಯಾರು ಅಂದರು.
ಆಗ ಇಸ್ರಾಯೇಲ್ ಮನೆತನವು ಅದಕ್ಕೆ ಮನ್ನ ಎಂದು ಹೆಸರಿಟ್ಟಿತು. ಅದು ಕೊತ್ತಂಬರಿ ಬೀಜದಂತೆ ಬೆಳ್ಳಗಿತ್ತು. ಅದರ ರುಚಿಯು ಜೇನಿನಲ್ಲಿ ಕಲಸಿದ ದೋಸೆಯಂತೆ ಇತ್ತು.
ಜನರು ಗುಣುಗುಟ್ಟಿದಾಗ ಅದು ಕರ್ತನಿಗೆ ಮೆಚ್ಚಿಗೆಯಾಗಲಿಲ್ಲ. ಕರ್ತನು ಅದನ್ನು ಕೇಳಿ ಕೋಪಿಸಿಗೊಂಡನು. ಕರ್ತನ ಬೆಂಕಿಯು ಅವರಲ್ಲಿ ಹತ್ತಿ ಪಾಳೆಯದ ಕಟ್ಟಕಡೆಯ ಭಾಗದಲ್ಲಿ ದಹಿಸಿತು.
ಅದು ನಿಮ್ಮ ಮೂಗಿನಿಂದ ಬಂದು ನಿಮಗೆ ಅಸಹ್ಯವಾಗುವ ತನಕ ಪೂರ್ತಿ ಒಂದು ತಿಂಗಳ ವರೆಗೆ ಮಾಂಸವನ್ನು ತಿನ್ನುವಿರಿ. ನಿಮ್ಮ ಮಧ್ಯದಲ್ಲಿರುವ ಕರ್ತನನ್ನು ನೀವು ಅಲಕ್ಷ್ಯಮಾಡಿ ಆತನ ಎದುರಿನಲ್ಲಿ ಅತ್ತು--ನಾವು ಯಾಕೆ ಐಗುಪ್ತದಿಂದ ಬಂದೆವು ಎಂದು ಹೇಳುತ್ತೀರಲ್ಲಾ ಅಂದನು.
ನೀನು ಅರಣ್ಯ ದಲ್ಲಿ ನಮ್ಮನ್ನು ಸಾಯಿಸುವದಕ್ಕೆ ಹಾಲೂ ಜೇನೂ ಹರಿಯುವ ದೇಶದೊಳಗಿಂದ ನಮ್ಮನ್ನು ಕರೆದುಕೊಂಡು ಬಂದದ್ದು ನಿನಗೆ ಅಲ್ಪವಾಯಿತೋ? ಮತ್ತು ನೀನು ಅರಸನಾಗಿ ನಮ್ಮನ್ನು ಆಳಬೇಕೋ?
ಆಗ ಇಸ್ರಾಯೇಲ್ ಮಕ್ಕಳು ಮೋಶೆಯ ಸಂಗಡ ಮಾತನಾಡಿ--ಇಗೋ, ಸಾಯುತ್ತೇವೆ. ನಾಶವಾಗು ತ್ತೇವೆ: ನಾವೆಲ್ಲರೂ ನಾಶವಾಗುತ್ತೇವೆ.
ಹೌದು, ಅವರು ದೇವರಿಗೆ ವಿರೋಧ ವಾಗಿ ಮಾತನಾಡಿ--ದೇವರು ಅರಣ್ಯದಲ್ಲಿ ಮೇಜನ್ನು ಸಿದ್ಧ ಮಾಡಬಲ್ಲನೋ ಅಂದರು.
ತೃಪ್ತಿ ಹೊಂದಿದವನು ಜೇನು ತುಪ್ಪವನ್ನೂ ಅಸಹ್ಯಿಸಿಕೊಳ್ಳು ತ್ತಾನೆ; ಹಸಿದವನಿಗೆ ಕಹಿಯಾದ ಪ್ರತಿಯೊಂದು ವಸ್ತುವು ಸಿಹಿಯಾಗಿದೆ.