TSK

TSK · ಙ್ಞಾನೋಕ್ತಿಗಳು 14:35

Treasury of Scripture Knowledge references in Kannada KJV.

ಅಂಗೀಕಾರಕ್ಕೆ ಹಿಂತಿರುಗಿ

ಫರೋಹನು ತನ್ನ ಸೇವಕರಿಗೆಯೋಸೇಫನಂತೆ ದೇವರಾತ್ಮವುಳ್ಳ ಮನುಷ್ಯನು ಸಿಕ್ಕಾನೋ ಅಂದನು.

ಡೊಂಕಾದ ಹೃದಯವು ನನ್ನನ್ನು ಬಿಟ್ಟು ಹೋಗುವದು; ಕೆಟ್ಟವನನ್ನು ತಿಳಿಯು ವದಿಲ್ಲ.

ನೀತಿಯ ತುಟಿಗಳು ಅರಸರ ಆನಂದ. ನ್ಯಾಯ ವಾದದ್ದನ್ನು ಮಾತನಾಡುವವನನ್ನು ಅವರು ಪ್ರೀತಿಸು ತ್ತಾರೆ.

ಅರಸನ ಕೋಪವು ಸಿಂಹದ ಘರ್ಜನೆಯಂತಿದೆ; ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ.

ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕೂತಿರುವ ಅರಸನು ತನ್ನ ಕಣ್ಣು ದೃಷ್ಟಿಯಿಂದ ಸಕಲ ಕೆಟ್ಟತನವನ್ನು ಚದರಿಸುವನು.

ಹೃದಯ ಶುದ್ಧಿಯನ್ನು ಪ್ರೀತಿಸುವವನಿಗೆ ತನ್ನ ತುಟಿಗಳ ಕೃಪೆಗಾಗಿ ಅರಸನು ಅವನಿಗೆ ಸ್ನೇಹಿತ ನಾಗಿರುವನು.

ಸುಳ್ಳಿಗೆ ಕಿವಿಗೊಡುವ ಅಧಿಕಾರಿಗೆ ಕಿವಿಗೊಟ್ಟರೆ ಅವನ ಸೇವಕರೆಲ್ಲರೂ ದುಷ್ಟರೇ.

ಆಗ ಅವನ ಯಜಮಾನನು ಅವನಿಗೆ--ನಂಬಿಗಸ್ತನಾದ ಒಳ್ಳೇ ಸೇವಕನೇ, ಒಳ್ಳೇದನ್ನು ಮಾಡಿದ್ದೀ. ಸ್ವಲ್ಪವಾದವುಗಳಲ್ಲಿ ನೀನು ನಂಬಿಗಸ್ತ ನಾದದ್ದರಿಂದ ನಾನು ನಿನ್ನನ್ನು ಬಹಳವಾದವುಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು; ನೀನು ನಿನ್ನ ಯಜಮಾನನ ಸಂತೋಷದಲ್ಲಿ ಪ್ರವೇಶಿಸು ಅಂದನು.

ಕರ್ತನು--ಹಾಗಾದರೆ ತಕ್ಕಕಾಲದಲ್ಲಿ ಅವರ ಪಾಲಿನ ಆಹಾರವನ್ನು ಕೊಡುವದಕ್ಕಾಗಿ ಒಡೆಯನು ತನ್ನ ಮನೆಯಮೇಲೆ ನೇಮಿಸುವ ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೇವಾರ್ತೆಯವನು ಯಾರು?