TSK

TSK · ಲೂಕನು 7:5

Treasury of Scripture Knowledge references in ಕನ್ನಡ IRV.

Back to passage

¶ ದಾವೀದನ ಜೀವಮಾನದಲ್ಲೆಲ್ಲಾ ಅವನ ಮಿತ್ರನಾಗಿದ್ದ ತೂರಿನ ಅರಸನಾದ ಹೀರಾಮನು ಸೊಲೊಮೋನನು ಅವನ ತಂದೆಯ ನಂತರ ಅಭಿಷೇಕಿಸಲ್ಪಟ್ಟನು ಎಂಬುದಾಗಿ ಕೇಳಿದಾಗ, ಅವನ ಬಳಿಗೆ ತನ್ನ ಸೇವಕರನ್ನು ಕಳುಹಿಸಿದನು.

¶ ತೂರಿನ ಅರಸನಾದ ಹೂರಾಮನು ಸೊಲೊಮೋನನಿಗೆ ಪತ್ರದ ಮೂಲಕ ತನ್ನ ಒಪ್ಪಿಗೆ ಸೂಚಿಸಿದನು. “ಯೆಹೋವನು ತನ್ನ ಪ್ರಜೆಗಳನ್ನು ಪ್ರೀತಿಸುವವನಾಗಿರುವುದರಿಂದ ನಿನ್ನನ್ನು ಅವರ ಅರಸನನ್ನಾಗಿ ನೇಮಿಸಿದ್ದಾನೆ.”

ಕ್ರಿಸ್ತ ಯೇಸುವಿನಲ್ಲಿರುವವರಿಗೆ ಸುನ್ನತಿಯಾದರೂ ಆಗದಿದ್ದರೂ ಪ್ರಯೋಜನವಿಲ್ಲ, ಆದರೆ ಅವರಲ್ಲಿ ಪ್ರೀತಿಯಿಂದ ಹೊರಹೊಮ್ಮುವ ನಂಬಿಕೆಯೇ ಪ್ರಯೋಜನವಾಗಿದೆ.

ನನ್ನ ಪ್ರಿಯ ಮಕ್ಕಳೇ, ನೀವು ಬರೀ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರದೆ ಕ್ರಿಯೆಗಳಿಂದಲೂ ಮತ್ತು ನಿಜ ಪ್ರೀತಿಯಿಂದ ಪ್ರೀತಿಸುವವರಾಗಿರಬೇಕು.