TSK

TSK · ಮತ್ತಾಯನು 18:28

Treasury of Scripture Knowledge references in ಕನ್ನಡ IRV.

Back to passage

ನಾನು ಮನಸ್ಸಿನಲ್ಲಿ ಸ್ವಲ್ಪ ಆಲೋಚಿಸಿಕೊಂಡು ಶ್ರೀಮಂತರಿಗೂ, ಅಧಿಕಾರಿಗಳಿಗೂ, “ನೀವು ನಿಮ್ಮ ಸಹೋದರರಿಂದ ಬಡ್ಡಿ ತೆಗೆದುಕೊಳ್ಳುವುದೆಂದರೇನು” ಎಂದು ಹೇಳಿ ಮಹಾಸಭೆಯನ್ನು ಕೂಡಿಸಿ

ದೇಶನಿವಾಸಿಗಳು ಮಾರುವುದಕ್ಕೋಸ್ಕರ ತರುವ ಯಾವ ಸರಕುಗಳನ್ನೂ, ಧಾನ್ಯವನ್ನೂ, ಸಬ್ಬತ್ ಮೊದಲಾದ ಪರಿಶುದ್ಧ ದಿನಗಳಲ್ಲಿ ಅವುಗಳನ್ನು ನಾವು ಕೊಂಡುಕೊಳ್ಳುವುದಿಲ್ಲ. ಪ್ರತಿ ಏಳನೆಯ ವರ್ಷದ ಭೂಮಿಯ ಸಾಗುವಳಿಯನ್ನೂ ಇತರರು ಕೊಡಬೇಕಾದ ಸಾಲವನ್ನೂ ಮನ್ನಾ ಮಾಡಿಬಿಡುತ್ತೇವೆ.

¶ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲಿನ ಪ್ರಭುಗಳೇ, ಇನ್ನು ಸಾಕು, ಕೊಳ್ಳೆಯನ್ನೂ ಬಲಾತ್ಕಾರವನ್ನೂ ತ್ಯಜಿಸಿ, ನೀತಿನ್ಯಾಯಗಳನ್ನು ನಡೆಸಿರಿ. ನನ್ನ ಜನರ ಬಾಧ್ಯತೆಗಳನ್ನು ತಪ್ಪಿಸುವ ಅನ್ಯಾಯವನ್ನು ಬಿಟ್ಟುಬಿಡಿರಿ. ಇದು ಕರ್ತನಾದ ಯೆಹೋವನ ನುಡಿ.