TSK

TSK · ಯೋಹಾನನು 3:13

Treasury of Scripture Knowledge references in Kannada KJV.

Back to passage

ನಾವು ಅದನ್ನು ಮಾಡು ವಂತೆ--ಯಾರು ನಮಗೋಸ್ಕರ ಆಕಾಶಕ್ಕೆ ಏರಿಹೋಗಿ ಅದನ್ನು ತಕ್ಕೊಂಡು ತಿಳಿಸುವರು, ಎಂಬುವ ಹಾಗೆ ಅದು ಆಕಾಶದಲ್ಲಿ ಇರುವಂಥದ್ದಲ್ಲ.

ಇದಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕೈಕೊಳ್ಳುವ ಹಾಗೆ ಅವರಿಗೆ ಬೋಧಿಸಿರಿ; ಮತ್ತು ಇಗೋ, ಲೋಕಾಂತ್ಯದ ವರೆಗೂ ಯಾವಾಗಲೂ ನಾನು ನಿಮ್ಮ ಸಂಗಡ ಇದ್ದೇನೆ ಅಂದನು. ಆಮೆನ್‌.

ಯಾವನೂ ಯಾವ ಕಾಲದಲ್ಲೂ ದೇವರನ್ನು ಕಂಡಿಲ್ಲ. ತಂದೆಯ ಎದೆಯಲ್ಲಿರುವ ಆ ಒಬ್ಬನೇ ಮಗ ನಾಗಿರುವಾತನು ಆತನನ್ನು ತಿಳಿಯಪಡಿಸಿದ್ದಾನೆ.

ಪರಲೋಕದಿಂದ ಕೆಳಗೆ ಬಂದು ಲೋಕಕ್ಕೆ ಜೀವವನ್ನು ಕೊಡುವಾತನೇ ದೇವರ ರೊಟ್ಟಿಯಾಗಿದ್ದಾನೆ ಅಂದನು.

ಇವನು ಯೋಸೇಫನ ಮಗನಾದ ಯೇಸು ಅಲ್ಲವೇ? ಇವನ ತಂದೆ ತಾಯಿ ಗಳನ್ನು ನಾವು ಬಲ್ಲೆವಲ್ಲವೇ? ಹಾಗಾದರೆ--ನಾನು ಪರಲೋಕದಿಂದ ಇಳಿದು ಬಂದೆನು ಎಂದು ಇವನು ಹೇಳುವದು ಹೇಗೆ ಅಂದರು.

ಪರಲೋಕದಿಂದ ಇಳಿದುಬಂದ ಜೀವದ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಎಂದೆಂದಿಗೂ ಬದುಕುವನು; ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ ಕೊಡುವೆನು ಅಂದನು.

ಯೇಸು ಅವರಿಗೆ--ದೇವರು ನಿಮ್ಮ ತಂದೆಯಾಗಿದ್ದರೆ ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ; ಯಾಕಂದರೆ ನಾನು ದೇವರಿಂದ ಹೊರಟುಬಂದಿದ್ದೇನೆ. ನನ್ನಷ್ಟಕ್ಕೆ ನಾನೇ ಬರಲಿಲ್ಲ; ಆದರೆ ಆತನೇ ನನ್ನನ್ನು ಕಳುಹಿಸಿದನು.

ನಾನು ತಂದೆಯ ಬಳಿಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ; ತಿರಿಗಿ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ ಅಂದನು.

ಆದರೆ ನಂಬಿಕೆ ಯಿಂದುಂಟಾಗುವ ನೀತಿಯು ಹೇಳುವದೇನಂದರೆ, (ಮೇಲಿನಿಂದ ಕ್ರಿಸ್ತನನ್ನು ತರುವಂತೆ) ಪರಲೋಕಕ್ಕೆ ಏರಿ ಹೋಗುವವನು ಯಾರು?

ಸಭೆಯು ಆತನ ದೇಹವಾಗಿದೆ; ಎಲ್ಲವನ್ನು ಎಲ್ಲಾ ಸಂಬಂಧದಲ್ಲಿ ವ್ಯಾಪಿಸುವಾತನಿಂದ ಅದು ಪರಿಪೂರ್ಣತೆಯುಳ್ಳ ದಾಗಿದೆ.