TSK

TSK · ಙ್ಞಾನೋಕ್ತಿಗಳು 13:22

Treasury of Scripture Knowledge references in Kannada KJV.

Back to passage

ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ.

ಅವನು ಧೂಳಿನಂತೆ ಬೆಳ್ಳಿಯನ್ನು ಕೂಡಿಸಿಟ್ಟು ಮಣ್ಣಿನಂತೆ ವಸ್ತ್ರಗಳನ್ನು ಸಿದ್ಧಮಾಡಿ ಕೊಂಡಾಗ್ಯೂ

ಕರ್ತನಿಗೆ ಭಯಪಡುವ ಮನುಷ್ಯನು ಯಾರು? ಅವನು ಆದು ಕೊಳ್ಳುವ ಮಾರ್ಗದಲ್ಲಿ ಆತನು ಅವನಿಗೆ ಬೋಧಿಸುವನು.

ನಿನ್ನ ಸೇವಕರ ಮಕ್ಕಳು ನೆಲೆಯಾಗಿದ್ದು ಅವರ ಸಂತತಿಯು ನಿನ್ನ ಮುಂದೆ ಸ್ಥಾಪಿಸಲ್ಪಡುವದು.

ಹೌದು, ನಿನ್ನ ಮಕ್ಕಳ ಮಕ್ಕಳನ್ನೂ ಇಸ್ರಾಯೇಲಿನ ಮೇಲಿರುವ ಸಮಾಧಾನ ವನ್ನೂ ನೀನು ನೋಡುವಿ.

ದೇವರು ತನ್ನ ದೃಷ್ಟಿಯಲ್ಲಿ ಒಳ್ಳೆಯ ವನಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ದಯಪಾಲಿಸುತ್ತಾನೆ; ದೇವರ ದೃಷ್ಟಿಯಲ್ಲಿ ಒಳ್ಳೆಯವನಿಗೆ ಕೊಡುವದಕ್ಕಾಗಿ ಕೂಡಿಸಿ ಒದಗಿಸು ವಂತೆ ಪಾಪಿಗೆ ಪ್ರಯಾಸವನ್ನು ಕೊಡುತ್ತಾನೆ. ಎಲ್ಲಾ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ.