TSK

TSK · ಙ್ಞಾನೋಕ್ತಿಗಳು 2:21

Treasury of Scripture Knowledge references in Kannada KJV.

Back to passage

ಇದಲ್ಲದೆ ಕರ್ತನು ಯೋಬನ ಆರಂಭಕ್ಕಿಂತ ಅವನ ಅಂತ್ಯವನ್ನು ಆಶೀರ್ವದಿಸಿದನು. ಅವನಿಗೆ ಹದಿನಾಲ್ಕು ಸಾವಿರ ಕುರಿಗಳೂ ಆರು ಸಾವಿರ ಒಂಟೆಗಳೂ ಸಾವಿರ ಜೋಡಿ ಎತ್ತುಗಳೂ ಸಾವಿರ ಹೆಣ್ಣು ಕತ್ತೆಗಳೂ ಇದ್ದವು.

ದುರ್ಮಾರ್ಗಿಗಳು ಕಡಿದು ಹಾಕಲ್ಪಡುವರು; ಕರ್ತನನ್ನು ನಿರೀಕ್ಷಿಸುವವರೇ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವರು.

ಕರ್ತನು ಯಥಾರ್ಥರ ದಿನಗಳನ್ನು ಅರಿತಿದ್ದಾನೆ; ಅವರ ಬಾಧ್ಯತೆಯು ಯುಗಯುಗಕ್ಕೂ ಇರುವದು.

ನೀತಿವಂತರು ಭೂಮಿಯನ್ನು ಸ್ವಾಧೀನಮಾಡಿಕೊಂಡು ಎಂದೆಂದಿಗೂ ಅದರಲ್ಲಿ ವಾಸವಾಗಿರುವರು.

ಯಥಾರ್ಥರಿಗೆ ಕತ್ತಲಲ್ಲಿ ಬೆಳಕು ಹುಟ್ಟುತ್ತದೆ; ಆತನು ಕೃಪೆಯೂ ಅಂತಃಕರಣವೂ ನೀತಿ ಯೂ ಉಳ್ಳಾತನೇ.