TSK

TSK · ಧರ್ಮೋಪದೇಶಕಾಂಡ 2:21

Treasury of Scripture Knowledge references in Kannada KJV.

ಅಂಗೀಕಾರಕ್ಕೆ ಹಿಂತಿರುಗಿ

ನಾವು ಎಲ್ಲಿಗೆ ಹೋಗೋಣ? ನಮ್ಮ ಸಹೋದರರು--ಆ ಜನರು ನಮಗಿಂತ ದೊಡ್ಡವರೂ ಉದ್ದವಾದವರೂ; ಪಟ್ಟಣ ಗಳು ದೊಡ್ಡವುಗಳೂ ಆಕಾಶದ ಎತ್ತರಕ್ಕೂ ಗೋಡೆ ಯುಳ್ಳವುಗಳೂ; ಇದಲ್ಲದೆ ಅನಾಕ್ಯರ ಮಕ್ಕಳನ್ನು ಅಲ್ಲಿ ನೋಡಿದೆವು ಎಂದು ಹೇಳಿ ನಮ್ಮ ಹೃದಯಗಳನ್ನು ಅಧೈರ್ಯಪಡಿಸಿದ್ದಾರೆ ಎಂದು ಹೇಳಿದಿರಿ.

ಕರ್ತನು ಸೇಯಾರಿನಲ್ಲಿ ವಾಸವಾಗಿ ರುವ ಏಸಾವನ ಮಕ್ಕಳಿಗೆ ಮಾಡಿದ ಹಾಗಾಯಿತು. ಅವನು ಅವರ ಮುಂದೆ ಹೋರಿಯರನ್ನು ನಾಶ ಮಾಡಿದಾಗ ಅವರು ಇವರನ್ನು ಹೊರಡಿಸಿ ಇವರ ಬದಲಾಗಿ ಇಂದಿನ ವರೆಗೂ ವಾಸಿಸಿದ್ದವರಲ್ಲಾ.

ನಿನ್ನ ದೇವರಾದ ಕೆಮೋಷನು ಸ್ವತಂತ್ರಿ ಸಿಕೊಳ್ಳಲು ನಿನಗೆ ಕೊಡುವ ದೇಶವನ್ನು ನೀನು ಸ್ವತಂತ್ರಿಸಿಕೊಳ್ಳುವದಿಲ್ಲವೋ? ಹಾಗೆಯೇ ನಮ್ಮ ದೇವರಾದ ಕರ್ತನು ಯಾರನ್ನು ನಮ್ಮ ಮುಂದೆ ಹೊರಡಿಸುವನೋ ಅವರನ್ನು ನಾವು ಸ್ವಾಧೀನಮಾಡಿ ಕೊಳ್ಳುವೆವು.

ಅವರು ಅರಸರನ್ನು ಧಿಕ್ಕರಿಸುವರು; ಪ್ರಧಾನರು ಅವರಿಗೆ ಪರಿಹಾಸ್ಯ ಮಾಡುವರು. ಕೋಟೆಗಳಿಗೆಲ್ಲಾ ಕುಚೋದ್ಯ ಮಾಡು ವರು. ಮಣ್ಣನ್ನು ಕುಪ್ಪೆಮಾಡಿ ಅದನ್ನು ಹಿಡಿಯುವರು.