TSK

TSK · ಆದಿಕಾಂಡ 29:21

Treasury of Scripture Knowledge references in Kannada KJV.

ಅಂಗೀಕಾರಕ್ಕೆ ಹಿಂತಿರುಗಿ

ಹೀಗಿರುವದರಿಂದ ಯಾಕೋಬನು ರಾಹೇಲಳನ್ನು ಪ್ರೀತಿಮಾಡಿ--ನಾನು ನಿನ್ನ ಕಿರಿಮಗಳಾಗಿರುವ ರಾಹೇಲಳಿಗೋಸ್ಕರ ನಿನ್ನಲ್ಲಿ ಏಳು ವರುಷ ಸೇವೆ ಮಾಡುತ್ತೇನೆ ಅಂದನು.

ನಿನ್ನ ಇಬ್ಬರು ಕುಮಾರ್ತೆಯರಿಗಾಗಿ ಹದಿನಾಲ್ಕು ವರುಷ, ನಿನ್ನ ಮಂದೆಗಳಿಗೋಸ್ಕರ ಆರು ವರುಷ, ಈ ಪ್ರಕಾರ ಇಪ್ಪತ್ತು ವರುಷ ನಿನ್ನ ಮನೆಯಲ್ಲಿ ಇದ್ದು ಸೇವೆಮಾಡಿದೆನು; ಆದರೆ ನೀನು ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದಿ.

ಕೆಲವು ದಿನಗಳ ತರುವಾಯ ಆದದ್ದೇನಂದರೆ, ಗೋಧಿಯ ಸುಗ್ಗೀ ಕಾಲದಲ್ಲಿ ಸಂಸೋನನು ತನ್ನ ಹೆಂಡತಿಯನ್ನು ನೋಡುವದಕ್ಕೆ ಒಂದು ಮೇಕೆಯ ಮರಿಯನ್ನು ತೆಗೆದುಕೊಂಡು ಹೋಗಿ ಅವನು--ನನ್ನ ಹೆಂಡತಿಯ ಬಳಿಗೆ ಕೊಠಡಿಯಲ್ಲಿ ಪ್ರವೇಶಿಸುತ್ತೇನೆ ಅಂದನು.