TSK

TSK · ಆದಿಕಾಂಡ 36:31

Treasury of Scripture Knowledge references in Kannada KJV.

ಅಂಗೀಕಾರಕ್ಕೆ ಹಿಂತಿರುಗಿ

ನಾನು ನಿನ್ನನ್ನು ಅತ್ಯಧಿಕವಾಗಿ ವೃದ್ಧಿ ಯಾಗಮಾಡಿ ನಿನ್ನಿಂದ ಜನಾಂಗಗಳಾಗ ಮಾಡುವೆನು; ನಿನ್ನಿಂದ ಅರಸರು ಹುಟ್ಟುವರು.

ಕರ್ತನು ಆಕೆಗೆ--ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ತರವಾದ ಜನಗಳು ಬೇರೆಬೇರೆಯಾಗುವರು. ಒಂದು ತರವಾದ ಜನಕ್ಕಿಂತ ಇನ್ನೊಂದು ಬಲಗೊಳ್ಳು ವದು. ಇದಲ್ಲದೆ ಹಿರಿಯನು ಕಿರಿಯನನ್ನು ಸೇವಿಸುವನು ಎಂದು ಹೇಳಿದನು.

ನಾನು ಅವನನ್ನು ನೋಡು ವೆನು, ಈಗಲ್ಲ; ಅವನನ್ನು ದೃಷ್ಟಿಸುವೆನು, ಸವಿಾಪದಲ್ಲಿ ಅಲ್ಲ; ಯಾಕೋಬನಿಂದ ನಕ್ಷತ್ರ ಉದಯಿಸುವದು; ಇಸ್ರಾಯೇಲ್‌ನಿಂದ ರಾಜದಂಡ ಏಳುವದು; ಅದು ಮೋವಾಬಿನ ಮೂಲೆಗಳನ್ನು ಹೊಡೆದು ಶೇತನ ಸಕಲ ಮಕ್ಕಳನ್ನು ಸಂಹರಿಸುವದು.

ಜನರ ಮುಖ್ಯಸ್ಥರೂ ಇಸ್ರಾಯೇಲಿನ ಗೋತ್ರ ಗಳೂ ಕೂಡಿಕೊಂಡಿದ್ದಾಗ ಆತನು ಯೆಶುರೂನಿನಲ್ಲಿ ಅರಸನಾಗಿದ್ದನು.

ಇಸ್ರಾಯೇಲಿನ ಮಕ್ಕಳ ಮೇಲೆ ಯಾವ ಅರ ಸನೂ ಆಳದ ಮುಂಚೆ ಎದೋಮ್‌ ದೇಶದಲ್ಲಿ ಆಳಿದ ಅರಸುಗಳು ಯಾರಂದರೆ--ಬೆಯೋರನ ಮಗನಾದ ಬೆಳನು.