ಯಾಕಂದರೆ ಮನುಷ್ಯಕುಮಾರನು ತನ್ನ ತಂದೆಯ ಮಹಿಮೆಯಲ್ಲಿ ತನ್ನ ದೂತರೊಡನೆ ಬಂದಾಗ ಆತನು ಪ್ರತಿಯೊಬ್ಬ ನಿಗೂ ಅವನವನ ಕೆಲಸಗಳಿಗೆ ತಕ್ಕಂತೆ ಪ್ರತಿಫಲವನ್ನು ಕೊಡುವನು ಎಂದು ಹೇಳಿದನು.
TSK
TSK · ಯೋಹಾನನು 21:22
Treasury of Scripture Knowledge references in Kannada KJV.
ಯಾಕಂದರೆ ಮಿಂಚು ಪೂರ್ವದಿಂದ ಹೊರಟು ಬಂದು ಪಶ್ಚಿಮದವರೆಗೆ ಹೊಳೆಯು ವಂತೆಯೇ ಮನುಷ್ಯಕುಮಾರನ ಬರೋಣವೂ ಇರು ವದು.
ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವನು;
ಅವನು ಎಂಥ ಮರಣ ದಿಂದ ದೇವರನ್ನು ಮಹಿಮೆಪಡಿಸಬೇಕಾಗಿದೆ ಎಂದು ಸೂಚಿಸಿ ಆತನು ಇದನ್ನು ಹೇಳಿದನು. ಆತನು ಇದನ್ನು ಹೇಳಿದ ಮೇಲೆ ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು.
ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣ ವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.
ಇಗೋ ಆತನು ಮೇಘಗ ಳೊಂದಿಗೆ ಬರುತ್ತಾನೆ; ಎಲ್ಲರ ಕಣ್ಣುಗಳು ಆತನನ್ನು ಕಾಣುವವು; ಆತನನ್ನು ಇರಿದವರು ಸಹ ಕಾಣುವರು; ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ಗೋಳಾಡುವರು. ಹೌದು, ಹಾಗೆಯೇ ಆಗುವದು. ಆಮೆನ್.
ಇಗೋ, ನಾನು ಬೇಗನೆ ಬರುತ್ತೇನೆ; ನಿನ್ನ ಕಿರೀಟವನ್ನು ಯಾರೂ ಅಪಹರಿಸ ದಂತೆ ನಿನಗಿರುವದನ್ನು ಬಿಗಿಯಾಗಿ ಹಿಡಿದುಕೊಂಡಿರು;
ಇವುಗಳನ್ನು ಸಾಕ್ಷೀಕರಿಸುವಾತನು--ಖಂಡಿತ ವಾಗಿ ನಾನು ಬೇಗ ಬರುತ್ತೇನೆ ಎಂದು ಹೇಳುತ್ತಾನೆ. ಆಮೆನ್. ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ.