ಈಜೆಬೆ ಲಳು ಕರ್ತನ ಪ್ರವಾದಿಗಳನ್ನು ಕೊಲ್ಲುವಾಗ ಓಬ ದ್ಯನು ನೂರು ಮಂದಿ ಪ್ರವಾದಿಗಳನ್ನು ತೆಗೆದುಕೊಂಡು ಐವತ್ತು ಐವತ್ತು ಮಂದಿಯಾಗಿ ಅವರನ್ನು ಗವಿಯಲ್ಲಿ ಬಚ್ಚಿಟ್ಟು ಅವರಿಗೆ ಆಹಾರವನ್ನೂ ನೀರನ್ನೂ ಕೊಟ್ಟು ಅವರನ್ನು ಸಂರಕ್ಷಣೆ ಮಾಡುತ್ತಾ ಇದ್ದನು.)
TSK
TSK · ಮತ್ತಾಯನು 21:35
Treasury of Scripture Knowledge references in Kannada KJV.
ಈಜೆಬೆಲಳು ಎಲೀಯನ ಬಳಿಗೆ ದೂತ ನನ್ನು ಕಳುಹಿಸಿ--ನಾನು ನಾಳೆ ಇಷ್ಟು ಹೊತ್ತಿಗೆ ಅವ ರಲ್ಲಿರುವ ಒಬ್ಬೊಬ್ಬನ ಪ್ರಾಣದ ಹಾಗೆ ನಿನ್ನ ಪ್ರಾಣಕ್ಕೂ ಮಾಡದೆ ಹೋದರೆ ದೇವರುಗಳು ನನಗೆ ಹೀಗೆಯೂ ಹೆಚ್ಚಾಗಿಯೂ ಮಾಡಲಿ ಎಂದು ಹೇಳಿದಳು.
ಆಗ ಕೆನಾನನ ಮಗನಾದ ಚಿದ್ಕೀಯನು ಸವಿಾ ಪಕ್ಕೆ ಬಂದು ವಿಾಕಾಯೆಹುವಿನ ಕೆನ್ನೆಯ ಮೇಲೆ ಹೊಡೆದು--ಕರ್ತನ ಆತ್ಮವು ನನ್ನನ್ನು ಬಿಟ್ಟು ನಿನ್ನ ಸಂಗಡ ಮಾತನಾಡಲು ಯಾವ ಮಾರ್ಗವಾಗಿ ಹೋಯಿತು ಅಂದನು.
ಆದದರಿಂದ ಅವರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ಕರ್ತನ ಆಲಯದ ಅಂಗಳದಲ್ಲಿ ಅರಸನ ಅಪ್ಪಣೆಯಂತೆ ಅವನನ್ನು ಕಲ್ಲೆಸೆದು ಕೊಂದರು.
ಆದಾಗ್ಯೂ ಅವರು ನಿನಗೆ ಅವಿಧೇಯರಾಗಿ, ವಿರೋಧವಾಗಿ, ನಿಂತು ತಿರುಗಿಬಿದ್ದು, ನಿನ್ನ ನ್ಯಾಯ ಪ್ರಮಾಣವನ್ನು ತಮ್ಮ ಬೆನ್ನಿನ ಹಿಂದಕ್ಕೆ ಬಿಸಾಡಿ, ಅವರು ನಿನ್ನ ಕಡೆಗೆ ತಿರುಗಬೇಕೆಂದು ಸಾಕ್ಷಿ ಹೇಳಿದ ನಿನ್ನ ಪ್ರವಾದಿಗಳನ್ನು ಕೊಂದು ಬಹು ಕೋಪೋದ್ರೇಕ ಗೊಳಿಸಿದರು.
ಯೆಹೂದದ ಅರಸನಾದ ಅಮ್ಮೋನನ ಮಗನಾದ ಯೋಷೀಯನ ಹದಿಮೂರನೇ ವರುಷ ಮೊದಲ್ಗೊಂಡು ಇಂದಿನ ವರೆಗೂ ಈ ಇಪ್ಪತ್ತು ಮೂರು ವರುಷ ಕರ್ತನ ವಾಕ್ಯವು ನನಗೆ ಉಂಟಾಗಿ ನಾನು ಅದನ್ನು ನಿಮಗೆ ಹೇಳಿದ್ದೇನೆ, ಬೆಳಿಗ್ಗೆ ಎದ್ದು ಹೇಳಿದ್ದೇನೆ; ಆದರೆ ನೀವು ಕೇಳಲಿಲ್ಲ.
ಸಂತೋಷಿಸಿರಿ, ಅತಿ ಉಲ್ಲಾಸದಿಂದಿರ್ರಿ; ಯಾಕಂದರೆ ಪರಲೋಕದಲ್ಲಿ ನಿಮ್ಮ ಪ್ರತಿಫಲವು ದೊಡ್ಡದಾಗಿದೆ; ನಿಮಗಿಂತ ಮುಂಚೆ ಇದ್ದ ಪ್ರವಾದಿ ಗಳನ್ನು ಅವರು ಹೀಗೆಯೇ ಹಿಂಸಿಸಿದರಲ್ಲಾ.
ಆದಾಗ್ಯೂ ಈ ದಿವಸ ನಾಳೆ ಮತ್ತು ನಾಡದ್ದು ನಾನು ಸಂಚರಿಸಲೇಬೇಕು; ಯಾಕಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲ್ಲಲ್ಪಡಲಾರನು.
ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು ತಮ್ಮ ಸ್ವಂತ ಪ್ರವಾದಿಗಳನ್ನು ಕೊಂದರು; ನಮ್ಮನ್ನು ಹಿಂಸಿಸಿದರು; ಅವರು ದೇವರನ್ನು ಮೆಚ್ಚಿಸುವವರಲ್ಲ, ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ.
ಆತನು ಐದನೆಯ ಮುದ್ರೆಯನ್ನು ತೆರೆದಾಗ ದೇವರವಾಕ್ಯದ ನಿಮಿತ್ತವಾಗಿಯೂ ತಾವು ಹೊಂದಿದ್ದ ಸಾಕ್ಷಿಯ ನಿಮಿತ್ತವಾಗಿಯೂ ಹತವಾದವರ ಆತ್ಮಗಳು ಯಜ್ಞವೇದಿಯ ಕೆಳಗಿರುವದನ್ನು ನಾನು ಕಂಡೆನು.