TSK

TSK · ಙ್ಞಾನೋಕ್ತಿಗಳು 20:13

Treasury of Scripture Knowledge references in Kannada KJV.

ಅಂಗೀಕಾರಕ್ಕೆ ಹಿಂತಿರುಗಿ

ಹೀಗೆ ದಾರಿದ್ರ್ಯವು ಪ್ರಯಾಣ ಮಾಡು ವವನ ಹಾಗೂ ನಿನ್ನ ಕೊರತೆಯು ಯುದ್ಧಸ್ಥರ ಹಾಗೂ ಬರುವದು.

ತನ್ನ ಹೊಲವನ್ನು ವ್ಯವಸಾಯ ಮಾಡುವವನು ರೊಟ್ಟಿಯಿಂದ ತೃಪ್ತಿ ಹೊಂದುವನು; ನಿಷ್ಪ್ರಯೋಜಕರನ್ನು ಹಿಂಬಾಲಿಸುವ ವನು ವಿವೇಕ ಶೂನ್ಯನು.

ಮೈಗಳ್ಳತನವು ಗಾಢ ನಿದ್ರೆಯಲ್ಲಿ ಮುಳು ಗಿಸುತ್ತದೆ; ಸೋಮಾರಿಯ ಪ್ರಾಣವು ಹಸಿವೆಗೊಳ್ಳು ವದು.

ಆಗ ಹಡಗಿನ ಯಜಮಾನನು ಅವನ ಬಳಿಗೆ ಬಂದು--ನಿದ್ರೆಮಾಡುವವನೇ, ನಿನಗೆ ಏನಾಯಿತು? ಎದ್ದು ನಿನ್ನ ದೇವರನ್ನು ಕೂಗು; ಒಂದು ವೇಳೆ ನಾವು ನಾಶವಾಗದ ಹಾಗೆ ದೇವರು ನಮ್ಮನ್ನು ಜ್ಞಾಪಕ ಮಾಡ್ಯಾನು ಅಂದನು.

ಈಗ ನಿದ್ರೆಯಿಂದ ಎಚ್ಚರವಾಗತಕ್ಕ ಕಾಲವೆಂದು ಅರಿತುಕೊಳ್ಳಿರಿ; ನಾವು ಮೊದಲು ನಂಬಿದ ಕಾಲದಲ್ಲಿ ಇದ್ದದ್ದಕ್ಕಿಂತ ಈಗ ನಮ್ಮ ರಕ್ಷಣೆಯು ಹತ್ತಿರವಾಯಿತು.

ಆದದರಿಂದ-- ನಿದ್ರೆ ಮಾಡುವವನೇ, ಎಚ್ಚರವಾಗು, ಸತ್ತವರಿಂದ ಎದ್ದೇಳು; ಕ್ರಿಸ್ತನು ನಿನಗೆ ಪ್ರಕಾಶಕೊಡುವನು ಎಂದು ಆತನು ಹೇಳುತ್ತಾನೆ.