TSK

TSK · ಙ್ಞಾನೋಕ್ತಿಗಳು 20:6

Treasury of Scripture Knowledge references in Kannada KJV.

ಅಂಗೀಕಾರಕ್ಕೆ ಹಿಂತಿರುಗಿ

ಕರ್ತನೇ, ಸಹಾಯಮಾಡು; ಯಾಕಂದರೆ ಭಕ್ತನು ಮುಗಿದು ಹೋಗುತ್ತಾನೆ; ನಂಬಿಗಸ್ತರು ಮನುಷ್ಯನ ಮಕ್ಕಳೊಳಗಿಂದ ಇಲ್ಲದೆ ಹೋಗುತ್ತಾರೆ.

ಸುಳ್ಳಾದ ದಾನದ ವಿಷ ಯವಾಗಿ ಹೊಗಳಿಕೊಳ್ಳುವವನು ಮಳೆ ಇಲ್ಲದ ಮೋಡ ಗಳ ಮತ್ತು ಗಾಳಿಯ ಹಾಗೆ ಇದ್ದಾನೆ.

ಅದನ್ನು ಇನ್ನೂ ನನ್ನ ಪ್ರಾಣವು ಹುಡುಕುತ್ತದೆ; ನನಗೆ ಸಿಕ್ಕಲಿಲ್ಲ; ಸಾವಿರದಲ್ಲಿ ಒಬ್ಬ ಪುರುಷನನ್ನು ನಾನು ಕಂಡುಕೊಂಡಿ ದ್ದೇನೆ; ಅವರೆಲ್ಲರಲ್ಲಿ ನಾನು ಒಬ್ಬ ಹೆಂಗಸನ್ನು ಕಂಡು ಕೊಳ್ಳಲಿಲ್ಲ.

ನನಗೆ ಅಯ್ಯೋ, ಯಾಕಂದರೆ ನಾನು ಬೇಸಿಗೆ ಕಾಲದ ಹಣ್ಣುಗಳನ್ನು ಕೂಡಿಸುವ ವರ ಹಾಗೆಯೂ ದ್ರಾಕ್ಷೇ ಸುಗ್ಗಿಯಲ್ಲಿ ಹಕ್ಕಲು ಆರಿಸುವವರ ಹಾಗೆಯೂ ಇದ್ದೇನೆ; ತಿನ್ನುವದಕ್ಕೆ ಗೊನೆ ಇಲ್ಲ. ನನ್ನ ಪ್ರಾಣವು ಮೊದಲು ಹಣ್ಣಾದ ಅಂಜೂರ ವನ್ನು ಅಪೇಕ್ಷಿಸಿಯದೆ.

ಆದದರಿಂದ ಕಪಟಿಗಳು ಜನರಿಂದ ಹೊಗಳಿಸಿ ಕೊಳ್ಳಬೇಕೆಂದು ಸಭಾಮಂದಿರಗಳಲ್ಲಿಯೂ ಬೀದಿಗಳ ಲ್ಲಿಯೂ ಮಾಡುವಂತೆ ನೀನು ದಾನ ಮಾಡುವಾಗ ನಿನ್ನ ಮುಂದೆ ತುತ್ತೂರಿಯನ್ನೂದಬೇಡ. ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಅವರು ತಮ್ಮ ಪ್ರತಿಫಲವನ್ನು ಹೊಂದಿದ್ದಾರೆ.

ಫರಿಸಾಯನು ನಿಂತುಕೊಂಡು ತನ್ನೊಳಗೆ ಹೀಗೆ ಪ್ರಾರ್ಥಿಸುತ್ತಾ--ದೇವರೇ, ಸುಲು ಕೊಳ್ಳುವವರೂ ಅನೀತಿವಂತರೂ ವ್ಯಭಿಚಾರಿಗಳೂ ಆಗಿರುವ ಮಿಕ್ಕಾದವರಂತೆ ಇಲ್ಲವೆ ಈ ಸುಂಕದವನ ಹಾಗೆ ನಾನು ಅಲ್ಲ, ಆದದರಿಂದ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ.

ಆದರೆ ಅವನು ಆತನಿಗೆ--ಕರ್ತನೇ, ನಾನು ನಿನ್ನ ಜೊತೆಯಲ್ಲಿ ಸೆರೆಮನೆಗೆ ಹೋಗುವದಕ್ಕೂ ಸಾಯು ವದಕ್ಕೂ ಸಿದ್ಧನಾಗಿದ್ದೇನೆ ಅಂದನು.

ನಾನು ಹೀಗೆ ಹೊಗಳಿಕೊಳ್ಳುವದರಲ್ಲಿ ಬುದ್ಧಿಹೀನ ನಾದೆನು; ಅದಕ್ಕೆ ನೀವೇ ನನ್ನನ್ನು ಬಲವಂತ ಮಾಡಿದಿರಿ. ನಿಮ್ಮಿಂದಲೇ ನನಗೆ ಹೊಗಳಿಕೆಯು ಉಂಟಾಗಬೇಕಾಗಿತ್ತು; ಯಾಕಂದರೆ ನಾನು ಏನೂ ಅಲ್ಲದವನಾದರೂ ಅತಿಶ್ರೇಷ್ಠರಾದ ಅಪೊಸ್ತಲರಿಗಿಂತ ಯಾವದರಲ್ಲಿಯೂ ನಾನು ಕಡಿಮೆಯಾದವನಲ್ಲ.