TSK

TSK · 1 ಪೂರ್ವಕಾಲವೃತ್ತಾ 23:5

مراجع Treasury of Scripture Knowledge في ಕನ್ನಡ IRV.

العودة إلى المقطع

¶ ಮಂಜೂಷವು ವಿಶ್ರಾಂತಿಹೊಂದಿದ ಮೇಲೆ ದಾವೀದನಿಂದ ಯೆಹೋವನ ಆಲಯದಲ್ಲಿ ವಾದ್ಯ ಸೇವೆಗೆ ನೇಮಿಸಲ್ಪಟ್ಟವರ ಪಟ್ಟಿ.

¶ ದ್ವಾರಪಾಲಕರಲ್ಲಿ ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್, ಇವರೂ ಮತ್ತು ಇವರ ಸಹೋದರರು. ಇವರಲ್ಲಿ ಶಲ್ಲೂಮನು ಪ್ರಮುಖನಾಗಿದ್ದನು.

¶ ಆಗ ದಾವೀದನು ಲೇವಿಯರ ಪ್ರಧಾನರಿಗೆ, “ಗಾಯಕರಾದ ನಿಮ್ಮ ಸಹೋದರರನ್ನು ಸ್ವರಮಂಡಲ, ಕಿನ್ನರಿ, ತಾಳ ಮೊದಲಾದ ವಾದ್ಯಗಳಿಂದ ಉತ್ಸಾಹಧ್ವನಿ ಮಾಡುವುದಕ್ಕಾಗಿ ನೇಮಿಸಿರಿ” ಎಂದು ಆಜ್ಞಾಪಿಸಿದನು.

ಯೆದುತೂನನ ಮಗನಾದ ಓಬೇದೆದೋಮ್ ಮತ್ತು ಹೋಸ ಇವರನ್ನು, ಅವರ ಆರುವತ್ತೆಂಟು ಸಹೋದರರನ್ನೂ ಅಲ್ಲೇ ಇರಿಸಿದನು.

¶ ದೇವಾಲಯದ ದ್ವಾರಪಾಲಕ ವರ್ಗಗಳ ವಿಷಯ: ಕೋರಹೀಯನಾದ ಮೆಷೆಲೆಮ್ಯ ಎಂಬವನು, ಕೊರೇಯನ ಮಗ ಹಾಗೂ ಆಸಾಫನ ಮೊಮ್ಮಗ.

ಆಮೇಲೆ ಲೇವಿಯರಲ್ಲಿ ಕೆಹಾತ್ಯರೂ, ಕೋರಹಿಯರೂ ಎದ್ದು, ಇಸ್ರಾಯೇಲ್ ದೇವರಾದ ಯೆಹೋವನನ್ನು ಮಹಾಸ್ವರದಿಂದ ಕೀರ್ತಿಸಿದರು.

ಇದಲ್ಲದೆ, ಅವನು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಭಜಿಸುವುದಕ್ಕೋಸ್ಕರ ಲೇವಿಯರನ್ನು, ದಾವೀದನ ರಾಜದರ್ಶಿಯಾದ ಗಾದ್ ಹಾಗು ಪ್ರವಾದಿಯಾದ ನಾತಾನ್ ಇವರ ಆಜ್ಞಾನುಸಾರವಾಗಿ ಯೆಹೋವನ ಆಲಯದಲ್ಲಿ ನಿಲ್ಲಿಸಿದನು. ಯೆಹೋವನು ತಾನೇ ಪ್ರವಾದಿಗಳ ಮುಖಾಂತರ ಹೀಗೆ ಆಜ್ಞಾಪಿಸಿದ್ದನು.

ಗಾಯನ ನಿಪುಣರಾದ ಲೇವಿಯರೆಲ್ಲರೂ ಹೊರೆಹೊರುವವರ ಮೇಲ್ವಿಚಾರಕರಾಗಿದ್ದು ಎಲ್ಲಾ ವಿಧವಾದ ಕೆಲಸಮಾಡುವವರನ್ನು ನಡೆಸುತ್ತಿದ್ದರು; ಲೇವಿಯರಲ್ಲಿ ಕೆಲವರು ಲೇಖಕರೂ, ಕೆಲವರು ಅಧಿಕಾರಿಗಳೂ, ದ್ವಾರಪಾಲಕರೂ ಲೇವಿಯರೇ ಆಗಿದ್ದರು.

ಅವನೊಡನೆ ಕೆಲವು ಜನರು ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ಗಾಯಕರೂ, ದ್ವಾರಪಾಲಕರೂ ಮತ್ತು ದೇವಸ್ಥಾನದಾಸರೂ ಅರ್ತಷಸ್ತ ಅರಸನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಯೆರೂಸಲೇಮಿಗೆ ಬಂದರು.

ಇವರು ಹಾಡುತ್ತಾ, ಕುಣಿಯುತ್ತಾ, “ನನ್ನ ಜೀವಜಲದ ಒರತೆಗಳೆಲ್ಲಾ ನಿನ್ನಲ್ಲಿಯೇ ಇವೆ” ಎಂದು ಹೇಳುವರು.

ವೀಣೆಯ ಮೇಲೆ ಮನಸ್ಸು ಬಂದಂತೆ ಹಾಡುತ್ತಾರೆ; ದಾವೀದನ ಹಾಗೆ ಗಾನವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತಾರೆ.