ಆ ಪ್ರದೇಶದ ಬಂಗಾರವು ಅಮೂಲ್ಯವಾದದ್ದು. ಅಲ್ಲಿ ಬದೋಲಖ ಧೂಪವೂ, ಗೋಮೇಧಿಕದ ಅಮೂಲ್ಯ ರತ್ನವು ಸಿಕ್ಕುತ್ತದೆ.
TSK
TSK · 1 ಪೂರ್ವಕಾಲವೃತ್ತಾ 29:2
مراجع Treasury of Scripture Knowledge في ಕನ್ನಡ IRV.
ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಹೆಚ್ಚಿಸಿರಬೇಕು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಫಟಿಕಗಳು ಇರಬೇಕು.
¶ ಮುದ್ರಾಕ್ಷವನ್ನು ಕೆತ್ತುವ ರೀತಿಯಲ್ಲಿ ಗೋಮೇಧಕರತ್ನಗಳಲ್ಲಿ ಇಸ್ರಾಯೇಲನ ಹನ್ನೆರಡು ಮಕ್ಕಳ ಹೆಸರುಗಳನ್ನು ಕೆತ್ತಿ ಆ ರತ್ನಗಳನ್ನು ಕುಂದಣದಲ್ಲಿ ಹಚ್ಚಿದರು.
ಇದಲ್ಲದೆ ದಾವೀದನು ದ್ವಾರಗಳ ಮೂಲಕ ಹೋಗುವ ಬಾಗಿಲುಗಳಿಗೆ ಬೇಕಾದ ಮೊಳೆಗಳನ್ನೂ, ಪಟ್ಟಿಗಳನ್ನೂ ಮಾಡುವುದಕ್ಕೆ ಬಹಳ ಕಬ್ಬಿಣಗಳನ್ನೂ,
ಬಡಗಿಗಳೂ, ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣಗಳ ಎಲ್ಲಾ ತರಹದ ಕೆಲಸವನ್ನು ಮಾಡುವುದರಲ್ಲಿ ಜಾಣರು ನಿನ್ನೊಂದಿಗಿರುತ್ತಾರೆ. ಅವರನ್ನು ಎಣಿಸಲು ಸಾಧ್ಯವಿಲ್ಲ. ಎದ್ದು ಸಿದ್ಧನಾಗಿ ಕೆಲಸಕ್ಕೆ ಕೈ ಹಾಕು, ಯೆಹೋವನು ನಿನ್ನ ಸಂಗಡ ಇರಲಿ” ಎಂದು ಹೇಳಿದನು.
ಅಮೂಲ್ಯವಾದ ರತ್ನದ ಕಲ್ಲುಗಳಿಂದ ಅಲಯವನ್ನು ಅಲಂಕರಿಸಿದನು. ಆದರ ಬಂಗಾರವು ಪರ್ವಯಿಮ್ ದೇಶದ ಬಂಗಾರವಾಗಿತ್ತು.
“ಬೆಳ್ಳಿ ಸಿಕ್ಕುವ ಗಣಿಯೂ, ಚಿನ್ನದ ಅದುರು ದೊರಕುವ ಸ್ಥಳವೂ ಉಂಟಷ್ಟೆ.
ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಏಕೆಂದರೆ ನೀನು ಸೇರಬೇಕಾದ ಸಮಾಧಿಯಲ್ಲಿ ಯಾವ ಕೆಲಸವೂ, ಯುಕ್ತಿಯೂ, ತಿಳಿವಳಿಕೆಯೂ, ಜ್ಞಾನವೂ ಇರುವುದಿಲ್ಲ.
ಅವರು ತಮ್ಮ ಶಕ್ತಿಯನುಸಾರವಾಗಿ ಮಾತ್ರ ಕೊಡದೆ ಶಕ್ತಿಯನ್ನು ಮೀರಿ ತಮ್ಮಿಷ್ಟಕ್ಕೆ ತಾವೇ ಉದಾರವಾಗಿ ದಾನಮಾಡಿದರು.
ನೀವೆಲ್ಲರು ದೇವರ ವಿವಿಧ ವರಗಳ ವಿಷಯದಲ್ಲಿ ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಗಾಗಿ ಉಪಯೋಗಿಸಕೊಳ್ಳಲಿ.