TSK

TSK · 1 ಪೂರ್ವಕಾಲವೃತ್ತಾ 9:31

مراجع Treasury of Scripture Knowledge في ಕನ್ನಡ IRV.

العودة إلى المقطع

ನೀವು ಅರ್ಪಿಸುವ ಧಾನ್ಯ ನೈವೇದ್ಯ ಬಾಂಡ್ಲಿಯಲ್ಲಿ ಪಕ್ವಮಾಡಿದ್ದಾದರೆ ಅದು ಎಣ್ಣೆ ಹೊಯ್ದ ಗೋದಿಹಿಟ್ಟಿನದಾಗಿರಬೇಕು.

ಕಬ್ಬಿಣದ ಹಂಚಿನ ಮೇಲೆ ಎಣ್ಣೆ ಸವರಿ ಅದನ್ನು ಸುಡಬೇಕು. ಅದನ್ನು ತರುವಾಗ ಅದು ಎಣ್ಣೆಯಿಂದ ನೆನಸಿದ್ದಾಗಿರಬೇಕು. ಅದನ್ನು ಭಾಗಭಾಗವಾಗಿ ಮಾಡಿ ಯೆಹೋವನಿಗೆ ಸುವಾಸನೆಯುಳ್ಳ ನೈವೇದ್ಯವನ್ನಾಗಿ ಸಮರ್ಪಿಸಬೇಕು.

ಕೋರೇಯನ ಮಗನೂ ಎಬ್ಯಾಸಾಫನ ಮೊಮ್ಮಗನೂ ಕೋರಹನ ಮರಿಮಗನೂ ಆದ ಶಲ್ಲೂಮನೂ, ಅವನ ಗೋತ್ರ ಬಂಧುಗಳಾದ ಮಿಕ್ಕ ಕೋರಹಿಯರೂ ಗುಡಾರದ ದ್ವಾರಪಾಲಕ ಸೇವೆಗೆ ನೇಮಿಸಲ್ಪಟ್ಟರು. ಇವರ ಪೂರ್ವಿಕರು ಯೆಹೋವನ ಪಾಳೆಯದ ಪ್ರವೇಶ ದ್ವಾರವನ್ನು ಕಾಯುವವರಾಗಿದ್ದರು.

ಲೇವಿಯರಾದ ಮೇಲ್ಕಂಡ ನಾಲ್ಕು ಜನರು ದ್ವಾರಪಾಲಕರ ಮುಖ್ಯಸ್ಥರಾಗಿ ದೇವಾಲಯದ ಕೋಣೆಗಳನ್ನೂ ಮತ್ತು ಭಂಡಾರಗಳನ್ನೂ ನೋಡಿಕೊಳ್ಳುವ ಜವಾಬ್ದಾರರಾಗಿದ್ದರು.