TSK

TSK · ಆಮೋಸ 6:8

مراجع Treasury of Scripture Knowledge في ಕನ್ನಡ IRV.

العودة إلى المقطع

ನಾನು ನಿಮ್ಮ ನಡುವೆ ವಾಸಮಾಡುವೆನು; ನಿಮ್ಮನ್ನು ತಳ್ಳಿಬಿಡುವುದಿಲ್ಲ.

ಯೆಹೋವನು ಇದನ್ನು ಕಂಡು ಅವರ ವಿಷಯದಲ್ಲಿ ಬೇಸರಗೊಂಡನು; ತನ್ನ ಕುಮಾರ ಕುಮಾರ್ತೆಯರ ವಿಷಯದಲ್ಲಿ ವ್ಯಥೆಪಟ್ಟನು.

ನನಗೆ ಹಸಿವೆಯಿದ್ದರೆ ನಿಮಗೆ ತಿಳಿಸುವುದಿಲ್ಲ; ಏಕೆಂದರೆ ಲೋಕವೂ ಅದರಲ್ಲಿರುವುದೆಲ್ಲವೂ ನನ್ನದಲ್ಲವೇ.

ಆಗ ಯೆಹೋವನ ಕೋಪವು ಅವರ ಮೇಲೆ ಉರಿಗೊಂಡಿತು; ಆತನು ತನ್ನ ಸ್ವಾಸ್ತ್ಯವಾದ ಪ್ರಜೆಗಳನ್ನು ಅಸಹ್ಯಿಸಿ,

ಅಯ್ಯೋ, ಕುಡುಕರಾದ ಎಫ್ರಾಯೀಮ್ಯರ ಮಹಿಮೆಯ ಕಿರೀಟದ ಗತಿಯೇ! ದ್ರಾಕ್ಷಾರಸಕ್ಕೆ ಸೋತು ಹೋದವರ ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು, ಬಾಡುತ್ತಿರುವ ಹೂವಿನ ಪಾಡೇ!

ಆಹಾ, “ನಾನು ವಿಸ್ತಾರವಾದ ಅರಮನೆಯನ್ನೂ ವಿಶಾಲವಾದ ಮಹಡಿಗಳನ್ನೂ ಕಟ್ಟಿಸಿಕೊಳ್ಳುವೆನು” ಎಂದು ಹೇಳಿ, ಅಗಲಗಲವಾದ ಕಿಟಕಿಗಳನ್ನಿಡಿಸಿ, ಒಳಗೆ ಗೋಡೆಗೆಲ್ಲಾ ದೇವದಾರಿನ ಹಲಗೆಗಳನ್ನು ಹೊದಿಸಿ, ಕಿರಿಮಂಜಿಯ ಬಣ್ಣವನ್ನು ಬಳಿಸಿಕೊಳ್ಳುವವನ ಪಾಡನ್ನು ಏನು ಹೇಳಲಿ!

ಕರ್ತನು ವೈರಿಯಾಗಿ ಇಸ್ರಾಯೇಲನ್ನು ನುಂಗಿದ್ದಾನೆ; ಅದರ ಅರಮನೆಗಳನ್ನೆಲ್ಲಾ ತಿಂದುಬಿಟ್ಟು ಅದರ ಕೋಟೆಕೊತ್ತಲಗಳನ್ನು ನಾಶಮಾಡಿದ್ದಾನೆ; ಯೆಹೂದ ಸೀಮೆಯಲ್ಲಿ ಪ್ರಲಾಪ ಮತ್ತು ಗೋಳಾಟವನ್ನು ಹೆಚ್ಚಿಸಿದ್ದಾನೆ.

ಹೀಗಿರಲು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ: “ಶತ್ರುವು ನಿನ್ನ ದೇಶವನ್ನು ಮುತ್ತಿಕೊಳ್ಳುವನು. ನಿನ್ನ ಶಕ್ತಿಯನ್ನು ಕುಂದಿಸಿಬಿಡುವನು ಮತ್ತು ನಿನ್ನ ಅರಮನೆಗಳು ಸೂರೆಯಾಗುವವು.”

¶ ಯೆಹೋವನು ಯಾಕೋಬಿನ ಮಹಿಮೆಯ ಮೇಲೆ ಹೀಗೆ ಆಣೆಯಿಟ್ಟಿದ್ದಾನೆ, “ಖಂಡಿತವಾಗಿ ಅವರ ಕೃತ್ಯಗಳಲ್ಲಿ ಯಾವುದನ್ನೂ ಎಂದಿಗೂ ಮರೆತುಬಿಡುವುದಿಲ್ಲ”

ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಅಡಗಿಸಿಬಿಟ್ಟೆನು; ಅನಂತರ ನನಗೆ ಕುರಿಗಳ ವಿಷಯವಾಗಿ ತಾಳ್ಮೆ ತಪ್ಪಿತು; ಅವುಗಳಿಂದ ನನಗೆ ಬೇಸರವಾಯಿತು.