TSK

TSK · ವಿಮೋಚನಕಾಂಡ 22:24

مراجع Treasury of Scripture Knowledge في ಕನ್ನಡ IRV.

العودة إلى المقطع

¶ “‘ನಿಮ್ಮಲ್ಲಿ ಒಬ್ಬ ಸಹೋದರನು ಬಡತನದಿಂದ ಗತಿಹೀನನಾದರೆ, ಅವನು ಬದುಕಿಕೊಳ್ಳುವಂತೆ ನೀವು ಅವನನ್ನು ನಿಮ್ಮ ನಡುವೆ ಇಳಿದುಕೊಂಡ ವಿದೇಶೀಯನೆಂದು ಅಥವಾ ಪ್ರವಾಸಿಯೆಂದು ಭಾವಿಸಿ ಸಹಾಯಮಾಡಬೇಕು.

ಹೀಗೆ ನಡೆದರೆ ನೀವು ಸ್ವದೇಶವಾಗಿ ಪಡೆಯಲಿರುವ ದೇಶದಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿಯೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಭಿವೃದ್ಧಿಪಡಿಸುವನು.

ನಾನು ಮನಸ್ಸಿನಲ್ಲಿ ಸ್ವಲ್ಪ ಆಲೋಚಿಸಿಕೊಂಡು ಶ್ರೀಮಂತರಿಗೂ, ಅಧಿಕಾರಿಗಳಿಗೂ, “ನೀವು ನಿಮ್ಮ ಸಹೋದರರಿಂದ ಬಡ್ಡಿ ತೆಗೆದುಕೊಳ್ಳುವುದೆಂದರೇನು” ಎಂದು ಹೇಳಿ ಮಹಾಸಭೆಯನ್ನು ಕೂಡಿಸಿ

ದೇವರಿಂದ ಬರುವ ವಿಪತ್ತಿಗೆ ಹೆದರಿಕೊಂಡಿದ್ದೆನಷ್ಟೆ, ಆತನ ಪ್ರಭಾವದ ದೆಸೆಯಿಂದ ನಾನು ಇಂಥ ಕೃತ್ಯವನ್ನು ಮಾಡುವುದಕ್ಕಾಗಲಿಲ್ಲ.

ನಿನ್ನ ರೌದ್ರವನ್ನು ಅವರ ಮೇಲೆ ಸುರಿದುಬಿಡು; ನಿನ್ನ ಕೋಪಾಗ್ನಿಯು ಅವರನ್ನು ದಹಿಸಲಿ.

ಅವರ ಯೌವನಸ್ಥರು ಅಗ್ನಿಗೆ ಆಹುತಿಯಾದರು; ಅವರ ಕನ್ಯೆಯರು ವಿವಾಹವಾಗಲಿಲ್ಲ.

ಆದಕಾರಣ ಅವರ ಮಕ್ಕಳನ್ನು ಕ್ಷಾಮಕ್ಕೆ ಗುರಿಮಾಡಿ, ಕತ್ತಿಯ ಬಾಯಿಗೆ ಒಪ್ಪಿಸು; ಅವರ ಹೆಂಡತಿಯರು ಮಕ್ಕಳ್ಳಿಲ್ಲದವರಾಗಿಯೂ, ವಿಧವೆಯರಾಗಿಯೂ ಇರಲಿ; ಮೃತ್ಯುವು ಅವರ ಗಂಡಂದಿರನ್ನು ಸಂಹರಿಸಲಿ. ಯುದ್ಧದಲ್ಲಿ ಖಡ್ಗವು ಅವರ ಯುವಕರನ್ನು ವಧಿಸಲಿ.

¶ ಆತನ ಸಿಟ್ಟಿಗೆ ಯಾರು ಎದುರು ನಿಲ್ಲಲು ಸಾಧ್ಯ? ಆತನ ರೋಷಾಗ್ನಿಯ ಎದುರು ಯಾರು ನಿಂತಾರು? ಆತನ ರೌದ್ರವು ಜ್ವಾಲಾಪ್ರವಾಹದಂತೆ ಹರಿಯುತ್ತದೆ. ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.

ನೀನು ನಿನ್ನ ಮೊಂಡತನವನ್ನೂ, ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ ಅನುಸರಿಸಿ ನ್ಯಾಯತೀರ್ಪಿನ ದಿನದವರೆಗೂ ನಿನಗಾಗಿ ದೇವರ ಕೋಪವನ್ನು ಸಂಗ್ರಹಿಸಿಕೊಳ್ಳುತ್ತಾ ಇದ್ದೀ.