ಮೇಜು ಅದರ ಉಪಕರಣಗಳು, ಚೊಕ್ಕ ಬಂಗಾರದ ದೀಪಸ್ತಂಭ ಅದರ ಉಪಕರಣಗಳು,
TSK
TSK · ವಿಮೋಚನಕಾಂಡ 25:31
مراجع Treasury of Scripture Knowledge في ಕನ್ನಡ IRV.
¶ ಮತ್ತು ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿದನು. ಅದರ ಬುಡವನ್ನು ಮತ್ತು ಕಂಬವನ್ನು ನಕಾಸಿಕೆಲಸದಿಂದ ಮಾಡಿದನು. ಆ ದೀಪಸ್ತಂಭವನ್ನು ಅಖಂಡವಾಗಿ ಪುಷ್ಪದಗೊಂಚಲುಗಳು, ಪುಷ್ಪಗಳು, ಮೊಗ್ಗುಗಳು ಅಲಂಕಾರವಾಗಿ ಅದರಿಂದಲೇ ಹೊರಟಂತೆ ಕೆತ್ತಲಾಗಿತ್ತು.
ಚೊಕ್ಕ ಬಂಗಾರದ ದೀಪಸ್ತಂಭವನ್ನು, ಅದರ ಮೇಲಿಡಬೇಕಾದ ಹಣತೆಗಳನ್ನು, ಅದರ ಉಪಕರಣಗಳನ್ನು, ದೀಪಕ್ಕೆ ಬೇಕಾದ ಎಣ್ಣೆಯನ್ನು,
ನೀಲಿಬಟ್ಟೆಯಿಂದ ಮುಚ್ಚಿಬಿಟ್ಟು ಅದಕ್ಕೂ ಅದರ ಎಲ್ಲಾ ಉಪಕರಣಗಳಿಗೂ ಹಸನಾದ ತೊಗಲನ್ನು ಹೊದಿಸಿ ಅವುಗಳನ್ನು ಅಡ್ಡದಂಡಕ್ಕೆ ಕಟ್ಟಬೇಕು.
ದೇವಾಲಯದೊಳಗೆ ಕಲ್ಲು ಕಾಣಿಸದಂತೆ ಗೋಡೆಗಳನ್ನೆಲ್ಲಾ ಬಳ್ಳಿಗಳು ಮತ್ತು ಹೂವುಗಳು ಕೆತ್ತಿರುವ ದೇವದಾರಿನ ಹಲಿಗೆಗಳಿಂದ ಹೊದಿಸಿದನು.
ಮಹಾಪರಿಶುದ್ಧಸ್ಥಳದ ಎದುರಿಗೆ ಎಡಗಡೆಯಲ್ಲಿಯೂ, ಬಲಗಡೆಯಲ್ಲಿಯೂ ಇಡುವುದಕ್ಕಾಗಿ ಐದೈದರಂತೆ ಇಡುವುದಕ್ಕೋಸ್ಕರ ಚೊಕ್ಕ ಬಂಗಾರದಿಂದ ಮಾಡಿದ ಪುಷ್ಪಾಲಂಕಾರವುಳ್ಳ ಹತ್ತು ದೀಪಸ್ತಂಭಗಳು, ಬಂಗಾರದ ಹಣತೆ, ಇಕ್ಕಳಗಳು, ಚೊಕ್ಕ ಬಂಗಾರದ ಬಟ್ಟಲುಗಳು,
ಈ ಯಾಜಕರು ಪ್ರತಿದಿನ ಬೆಳಿಗ್ಗೆ ಹಾಗು ಸಾಯಂಕಾಲ ಯೆಹೋವನಿಗೋಸ್ಕರ ಸರ್ವಾಂಗಹೋಮಗಳನ್ನು ಸಮರ್ಪಿಸುತ್ತಾ ಸುಗಂಧದ್ರವ್ಯ ಧೂಪವನ್ನು ಹಾಕುತ್ತಾ ಶುದ್ಧ ಬಂಗಾರದ ಮೇಜಿನ ಮೇಲೆ ನೈವೇದ್ಯವಾದ ರೊಟ್ಟಿಗಳನ್ನಿಡುತ್ತಾ ಪ್ರತಿ ಸಾಯಂಕಾಲದಲ್ಲಿ ಬಂಗಾರದ ದೀಪಸ್ತಂಭದ ದೀಪಗಳನ್ನು ಹಚ್ಚುತ್ತಾ ಇರುತ್ತಾರೆ. ಹೀಗೆ ನಾವು ನಮ್ಮ ದೇವರಾದ ಯೆಹೋವನ ಕಟ್ಟಳೆಗಳನ್ನು ಕೈಕೊಳ್ಳುತ್ತೇವೆ; ನೀವಾದರೋ ಆತನನ್ನು ಬಿಟ್ಟವರು.
ಒಂದು ದೇವದರ್ಶನ ಗುಡಾರವು ಕಟ್ಟಲ್ಪಟ್ಟು, ಅದರ ಮೊದಲನೆಯ ಭಾಗದಲ್ಲಿ ದೀಪಸ್ತಂಭ, ಮೇಜು, ಮತ್ತು ಸಮರ್ಪಿಸಿದ ರೊಟ್ಟಿ ಇವುಗಳಿದ್ದವು. ಅದನ್ನು ಪವಿತ್ರಸ್ಥಳ ಎಂದು ಕರೆಯಲಾಗುತ್ತಿತು.
‹ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ. ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳ›‹ದೂತರು, ಆ ಏಳು ದೀಪಸ್ತಂಭಗಳು ಅಂದರೆ›‹ಆ ಏಳು ಸಭೆಗಳು.” ›
ಸಿಂಹಾಸನದಿಂದ ಮಿಂಚು, ಗುಡುಗು, ಗರ್ಜನೆಗಳು ಹೊರ ಹೊಮ್ಮುತ್ತಿದ್ದವು. ಆ ಸಿಂಹಾಸನ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಉರಿಯುತ್ತಿದ್ದವು.