TSK

TSK · ವಿಮೋಚನಕಾಂಡ 37:17

مراجع Treasury of Scripture Knowledge في ಕನ್ನಡ IRV.

العودة إلى المقطع

¶ “ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿಸಬೇಕು. ಅದರ ಕೆಳಭಾಗವನ್ನು ಕಂಬವನ್ನೂ ನಕಾಸಿ ಕೆಲಸದಿಂದ ಮಾಡಿಸಬೇಕು. ಆ ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳು, ಅರಳಿದ ಪುಷ್ಪಗಳು ಮೊಗ್ಗುಗಳು ಅಲಂಕಾರವಾಗಿ ಕೆತ್ತಿರಬೇಕು.

ಅವನು ಪ್ರತಿನಿತ್ಯವೂ ಯೆಹೋವನ ಸನ್ನಿಧಿಯಲ್ಲಿ ಹಣತೆಗಳನ್ನು ಆ ಚೊಕ್ಕಬಂಗಾರದ ದೀಪಸ್ತಂಭದ ಮೇಲೆ ಸರಿಯಾಗಿ ಇಟ್ಟು ನಿರ್ವಹಿಸಬೇಕು.

ಈ ಯಾಜಕರು ಪ್ರತಿದಿನ ಬೆಳಿಗ್ಗೆ ಹಾಗು ಸಾಯಂಕಾಲ ಯೆಹೋವನಿಗೋಸ್ಕರ ಸರ್ವಾಂಗಹೋಮಗಳನ್ನು ಸಮರ್ಪಿಸುತ್ತಾ ಸುಗಂಧದ್ರವ್ಯ ಧೂಪವನ್ನು ಹಾಕುತ್ತಾ ಶುದ್ಧ ಬಂಗಾರದ ಮೇಜಿನ ಮೇಲೆ ನೈವೇದ್ಯವಾದ ರೊಟ್ಟಿಗಳನ್ನಿಡುತ್ತಾ ಪ್ರತಿ ಸಾಯಂಕಾಲದಲ್ಲಿ ಬಂಗಾರದ ದೀಪಸ್ತಂಭದ ದೀಪಗಳನ್ನು ಹಚ್ಚುತ್ತಾ ಇರುತ್ತಾರೆ. ಹೀಗೆ ನಾವು ನಮ್ಮ ದೇವರಾದ ಯೆಹೋವನ ಕಟ್ಟಳೆಗಳನ್ನು ಕೈಕೊಳ್ಳುತ್ತೇವೆ; ನೀವಾದರೋ ಆತನನ್ನು ಬಿಟ್ಟವರು.

ಆಗ ನಾನು ದೇವದೂತನಿಗೆ, ದೀಪಸ್ತಂಭದ ಎಡಬಲದಲ್ಲಿರುವ ಈ ಎಣ್ಣೆಯ ಮರಗಳು ಏನು?” ಎಂದೆನು.

ಆತನಲ್ಲಿ ಜೀವವಿತ್ತು. ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು.

ಒಂದು ದೇವದರ್ಶನ ಗುಡಾರವು ಕಟ್ಟಲ್ಪಟ್ಟು, ಅದರ ಮೊದಲನೆಯ ಭಾಗದಲ್ಲಿ ದೀಪಸ್ತಂಭ, ಮೇಜು, ಮತ್ತು ಸಮರ್ಪಿಸಿದ ರೊಟ್ಟಿ ಇವುಗಳಿದ್ದವು. ಅದನ್ನು ಪವಿತ್ರಸ್ಥಳ ಎಂದು ಕರೆಯಲಾಗುತ್ತಿತು.