TSK

TSK · ಎಜ್ರನು 6:5

مراجع Treasury of Scripture Knowledge في ಕನ್ನಡ IRV.

العودة إلى المقطع

ಇದಲ್ಲದೆ, ಯೆಹೋವನು ಮುಂತಿಳಿಸಿದ ಪ್ರಕಾರ ಅವನು ಯೆಹೋವನ ಆಲಯದ ಮತ್ತು ಅರಸನ ಅರಮನೆಯ ಭಂಡಾರಗಳಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ದ್ರವ್ಯವನ್ನು ತೆಗೆದುಕೊಂಡು ಹೋದನು. ಇಸ್ರಾಯೇಲರ ಅರಸನಾದ ಸೊಲೊಮೋನನು ಯೆಹೋವನ ಆಲಯಕ್ಕಾಗಿ ಮಾಡಿಸಿದ್ದ ಬಂಗಾರದ ಎಲ್ಲಾ ಸಾಮಾನುಗಳನ್ನು ಮುರಿದುಬಿಟ್ಟನು.

ಬಾಬೆಲಿನ, ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಯುದ್ಧಕ್ಕೆ ಬಂದು ಅವನನ್ನು ಬಾಬಿಲೋನಿಗೆ ಒಯ್ಯುವುದಕ್ಕೋಸ್ಕರ ಅವನಿಗೆ ಬೇಡಿಹಾಕಿ,

ದೇವಾಲಯದ ಎಲ್ಲಾ ಚಿಕ್ಕ, ದೊಡ್ಡ ಸಾಮಾನುಗಳನ್ನೂ ಯೆಹೋವನ ಮಂದಿರದ ಭಂಡಾರದ ಹಾಗೂ ಅರಸನ ಮತ್ತು ಅವನ ಸರದಾರರ ಭಂಡಾರದ ದ್ರವ್ಯವನ್ನೂ ಬಾಬಿಲೋನಿಗೆ ಒಯ್ದನು.

ಅದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯದಿಂದ ತೆಗೆದುಕೊಂಡುಹೋಗಿ, ಬಾಬಿಲೋನಿನ ದೇವಾಲಯದಲ್ಲಿಟ್ಟಿದ್ದ ಬೆಳ್ಳಿಬಂಗಾರದ ದೇವಸ್ಥಾನ ಪಾತ್ರೆಗಳನ್ನು ಅಲ್ಲಿಂದ ತೆಗಿಸಿ ತಾನು ದೇಶಾಧಿಪತಿಯನ್ನಾಗಿ ನೇಮಿಸಿದ ಶೆಷ್ಬಚ್ಚರನಿಗೆ ಒಪ್ಪಿಸಿದನು.

ಈ ಪಟ್ಟಣವು ಏಕೆ ಹಾಳಾಗಬೇಕು? ಅವರು ಪ್ರವಾದಿಗಳಾಗಿದ್ದು ಯೆಹೋವನ ವಾಕ್ಯಕ್ಕೆ ನೆಲೆಯಾಗಿದ್ದರೆ, ಈಗ ಸೇನಾಧೀಶ್ವರನಾದ ಯೆಹೋವನಿಗೆ ವಿಜ್ಞಾಪನೆ ಮಾಡಿ ಯೆಹೋವನ ಆಲಯದಲ್ಲಿಯೂ ಯೆಹೂದದ ಅರಸನ ಮನೆಯಲ್ಲಿಯೂ ಯೆರೂಸಲೇಮಿನಲ್ಲಿಯೂ ಉಳಿದಿರುವ ಉಪಕರಣಗಳು ಬಾಬಿಲೋನಿಗೆ ಹೋಗದಂತೆ ಬೇಡಿಕೊಳ್ಳಲಿ.

ಆಗ ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನೂ, ದೇವಾಲಯದ ಅನೇಕ ಪಾತ್ರೆಗಳನ್ನೂ ಅವನ ವಶಕ್ಕೆ ಕೊಡಲು ಅವನು ಅವುಗಳನ್ನು ಶಿನಾರ್ ದೇಶಕ್ಕೆ ಸಾಗಿಸಿ ತನ್ನ ದೇವರ ಮಂದಿರಕ್ಕೆ ತಂದು ಆ ದೇವರ ಭಂಡಾರದಲ್ಲಿ ಸೇರಿಸಿಬಿಟ್ಟನು.