TSK

TSK · ಆದಿಕಾಂಡ 47:15

مراجع Treasury of Scripture Knowledge في ಕನ್ನಡ IRV.

العودة إلى المقطع

ಆ ಆಹಾರ ಪದಾರ್ಥಗಳನ್ನು ಶೇಖರಿಸಿಕೊಳ್ಳುವುದರಿಂದ ಐಗುಪ್ತ ದೇಶದಲ್ಲಿ ಉಂಟಾಗುವ ಏಳು ವರ್ಷಗಳ ಬರಗಾಲದಲ್ಲಿ ಜನರು ಸಾಯುವುದಿಲ್ಲ” ಎಂದು ಹೇಳಿದನು.

ಪೈರು ಕೊಯ್ಯುವ ಕಾಲದಲ್ಲಿ ಐದರಲ್ಲೊಂದು ಪಾಲು ಫರೋಹನಿಗೆ ಸಲ್ಲಬೇಕು; ಮಿಕ್ಕ ನಾಲ್ಕು ಪಾಲು ನಿಮ್ಮದು; ಅದು ಬೀಜಕ್ಕೆ ಆಗುತ್ತದೆ ಮತ್ತು ನಿಮಗೂ ನಿಮ್ಮ ಮನೆಯವರಿಗೂ ನಿಮ್ಮ ಕುಟುಂಬಕ್ಕೆ ಸೇರಿದವರೆಲ್ಲರಿಗೂ ಆಹಾರಕ್ಕಾಗುತ್ತದೆ” ಎಂದು ಹೇಳಿದನು.

ಅವನು ಅಲ್ಲಿಂದ ಪೆನೂವೇಲಿಗೆ ಬಂದು ಅಲ್ಲಿನವರನ್ನು ಅದೇ ಪ್ರಕಾರ ಬಿನ್ನವಿಸಲು ಅವರೂ ಸುಖೋತಿನವರಂತೆಯೇ ಉತ್ತರಕೊಟ್ಟರು.

ನಿನ್ನ ಆಳುಗಳನ್ನು ಕೇಳು, ಅವರೇ ಹೇಳುವರು. ಹೀಗಿರುವುದರಿಂದ ಶುಭಕಾಲದಲ್ಲಿ ನಿನ್ನ ಬಳಿಗೆ ಬಂದಿರುವ ನನ್ನ ಸೇವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಲಿ. ಕೃಪೆಮಾಡಿ ನಿನ್ನ ಸೇವಕರಿಗೂ ಮಗನಾದ ದಾವೀದನಿಗೂ ನಿನಗಿರುವುದರಲ್ಲಿ ಕೊಡು’ ಎಂದು ಹೇಳಿರಿ” ಎಂದು ಅವರನ್ನು ಕಳುಹಿಸಿದನು.

ಇವನಿಗೆ ಗಿರಿದುರ್ಗಗಳೇ, ಆಶ್ರಯ ಅನ್ನವು ಉಚಿತವಾಗಿ ಒದಗುವುದು, ನೀರು ನಿಸ್ಸಂದೇಹವಾಗಿ ದೊರಕುವುದು.