TSK

TSK · ಯೆರೆಮಿಯ 35:2

مراجع Treasury of Scripture Knowledge في ಕನ್ನಡ IRV.

العودة إلى المقطع

ಅವನು ದೇವಾಲಯದ ಸುತ್ತಲೂ ಒಂದರ ಮೇಲೊಂದು ಐದೈದು ಮೊಳ ಎತ್ತರವಾದ ಕೊಠಡಿಗಳನ್ನು ಕಟ್ಟಿಸಿದನು. ಇವು ದೇವದಾರಿನ ತೊಲೆಗಳಿಂದ ದೇವಾಲಯಕ್ಕೆ ಸೇರಿಸಲ್ಪಟ್ಟಿದ್ದವು.

ಯಾಬೇಚಿನಲ್ಲಿ ವಾಸಿಸುವ ಬರವಣಿಗೆಯಲ್ಲಿ ಮತ್ತು ದಾಖಲೆಗಳನ್ನು ಬರೆಯುವುದರಲ್ಲೂ ಮತ್ತು ಪ್ರತಿಗಳನ್ನು ಮಾಡುವುದರಲ್ಲೂ ಪ್ರವೀಣರಾದ ತಿರ್ರಾತ್ಯರು, ಶಿಮ್ಗಾತ್ಯರು ಮತ್ತು ಸೂಕಾತ್ಯರು, ಇವರು ರೇಕಾಬನ ಮನೆಯವರ ಮೂಲ ಪುರುಷನಾಗಿರುವ ಹಮತನಿಂದ ಹುಟ್ಟಿದ ಕೇನ್ಯರು.

ಇನ್ನೂ ಕೆಲವರು ವಾದ್ಯಗಾರರಾಗಿ ಸಂಗೀತ ಸೇವೆಮಾಡುವ ಜವಾಬ್ದಾರಿಯಿತ್ತು. ಇವರು ಲೇವಿಯ ಗೋತ್ರಗಳಲ್ಲಿ ಪ್ರಧಾನರೂ ದೇವಾಲಯದ ಕೋಣೆಗಳಲ್ಲಿ ವಾಸಿಸುವವರೂ ಆಗಿದ್ದರು. ಅವರು ಹಗಲಿರುಳು ಕೆಲಸದಲ್ಲಿ ಇರುತ್ತಿದ್ದರಿಂದ ಇತರ ಸೇವೆಯಿಂದ ಬಿಡುಗಡೆ ಹೊಂದಿದ್ದರು.

ಇವನು ಯೆಹೋವನ ಆಲಯದ ಅಂಗಳಗಳು, ಸುತ್ತಣ ಕೋಣೆಗಳು, ದೇವಾಲಯದ ಭಂಡಾರಗಳು, ಪ್ರತಿಷ್ಠಿತ ವಸ್ತುಗಳು, ಭಂಡಾರಗಳು ಇವುಗಳ ವಿಷಯವಾಗಿಯೂ,

ನೈವೇದ್ಯದ್ರವ್ಯ, ಧೂಪ, ಪಾತ್ರೆ ಇವುಗಳನ್ನೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನೂ, ದಶಮಾಂಶವನ್ನೂ, ಲೇವಿಯರಿಗೆ, ಗಾಯಕರಿಗೆ, ದ್ವಾರಪಾಲಕರಿಗೆ ಸಲ್ಲತಕ್ಕ ಪದಾರ್ಥಗಳನ್ನೂ, ಯಾಜಕರಿಗೋಸ್ಕರ ಪ್ರತ್ಯೇಕಿಸತಕ್ಕ ಪದಾರ್ಥಗಳನ್ನೂ, ಇಡುವುದಕ್ಕಾಗಿ ಉಪಯೋಗಿಸುತ್ತಿದ್ದ ಕೊಠಡಿಯನ್ನು ಟೋಬೀಯನಿಗೋಸ್ಕರ ಸಿದ್ಧಮಾಡಿಸಿ ಕೊಟ್ಟಿದ್ದನು.

ಯೆಹೋವನ ಆಲಯಕ್ಕೆ ಕರೆದು ಇಗ್ದಲ್ಯನ ಮಗನೂ, ದೇವರ ಮನುಷ್ಯನೂ ಆದ ಹಾನಾನನ ಮಕ್ಕಳ ಕೋಣೆಯೊಳಕ್ಕೆ, ಅಂದರೆ ಸರದಾರರ ಕೋಣೆಯ ಪಕ್ಕದಲ್ಲಿ, ಶಲ್ಲೂಮನ ಮಗನೂ ದ್ವಾರಪಾಲಕನೂ ಆದ ಮಾಸೇಯನ ಕೋಣೆಯ ಮೇಲ್ಗಡೆ ಇರುವ ಕೋಣೆಯೊಳಕ್ಕೆ ಬರಮಾಡಿದನು.

ಅಲ್ಲಿ ಗೋಡೆಯಲ್ಲಿದ್ದ ಒಂದೊಂದು ಕೋಣೆಯು ಒಂದು ಕೋಲು ಉದ್ದವಾಗಿಯೂ, ಒಂದು ಕೋಲು ಅಗಲವಾಗಿಯೂ ಇತ್ತು. ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಒಂದು ಕೋಲು. ಆ ಗೋಡೆಕೋಣೆಗಳು ಒಂದಕ್ಕೊಂದು ಐದೈದು ಮೊಳ ದೂರವಾಗಿದ್ದವು; ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಒಂದು ಕೋಲು.

¶ ಆಮೇಲೆ ಅವನು ಅಳತೆ ಮಾಡಲು, ದೇವಸ್ಥಾನದ ಗೋಡೆಯ ಅಗಲ ಆರು ಮೊಳಗಳೂ, ದೇವಸ್ಥಾನದ ಸುತ್ತುಮುತ್ತಲೂ ಎಲ್ಲಾ ಕಡೆ ಅದರ ಪಕ್ಕಗಳಿಗೆ ಅಂಟಿಕೊಂಡಿದ್ದ ಕೊಠಡಿಗಳ ಅಗಲ ನಾಲ್ಕು ನಾಲ್ಕು ಮೊಳಗಳೂ ಇದ್ದವು.