ಅವನ ಗಂಡುಮಕ್ಕಳೂ ಮತ್ತು ಹೆಣ್ಣುಮಕ್ಕಳೂ ಎಲ್ಲರೂ ಅವನ ದುಃಖ ಶಮನಮಾಡುವುದಕ್ಕೆ ಪ್ರಯತ್ನಿಸಿದ್ದಾಗ್ಯೂ ಅವನು ಸಮಾಧಾನ ಆದರಣೆ ಹೊಂದಲಾರದೇ, “ನಾನು ಹೀಗೆ ದುಃಖಪಡುತ್ತಾ ನನ್ನ ಮಗನೊಂದಿಗೆ ಸಮಾಧಿ ಸೇರುವೆನು” ಎಂದನು. ಹೀಗೆ ತಂದೆಯು ಮಗನಿಗೋಸ್ಕರ ದುಃಖಿಸಿದನು.
TSK
TSK · ಯೋಹಾನನು 11:19
مراجع Treasury of Scripture Knowledge في ಕನ್ನಡ IRV.
ತಹತನ ಮಗ ಜಾಬಾದ್, ಜಾಬಾದನ ಮಕ್ಕಳು ಶೂತೆಲಹ, ಏಜೆರ್ ಮತ್ತು ಎಲ್ಲಾದ್. ಇವರು ಗತ್ ಊರಿನವರ ದನಕುರಿಗಳನ್ನು ಸುಲಿಗೆ ಮಾಡುವುದಕ್ಕೋಸ್ಕರ ಗಟ್ಟಾ ಇಳಿದು ಅವರ ದೇಶಕ್ಕೆ ಹೋದುದರಿಂದ ಆ ದೇಶದ ಮೂಲ ನಿವಾಸಿಗಳು ಇವರನ್ನು ಕೊಂದುಹಾಕಿದರು.
ಆಗ ಅವನ ಎಲ್ಲಾ ಅಣ್ಣತಮ್ಮಂದಿರೂ, ಎಲ್ಲಾ ಅಕ್ಕತಂಗಿಯರೂ, ಮೊದಲು ಅವನ ಮನೆಯಲ್ಲಿ ಅವನೊಂದಿಗೆ ಭೋಜನಮಾಡುತ್ತಿದ್ದ ಎಲ್ಲಾ ಪರಿಚಿತರೂ ಅವನ ಬಳಿಗೆ ಬಂದು ಯೆಹೋವನು ಅವನ ಮೇಲೆ ಬರಮಾಡಿದ್ದ ಆಪತ್ತಿನ ವಿಷಯವಾಗಿ ತಮ್ಮ ತಮ್ಮ ಅನುತಾಪವನ್ನು ತೋರ್ಪಡಿಸಿ ಅವನನ್ನು ಸಂತೈಸಿದರು. ಇದಲ್ಲದೆ ಪ್ರತಿಯೊಬ್ಬರೂ ಒಂದೊಂದು ವರಹವನ್ನೂ ಒಂದೊಂದು ಚಿನ್ನದ ಉಂಗುರವನ್ನೂ ಅವನಿಗೆ ಕೊಟ್ಟರು.
ನಿನಗೆ ಈ ಎರಡು ಬಾಧೆಗಳು ಬಂದಿವೆ, ನಿನಗೋಸ್ಕರ ಸಂತಾಪವನ್ನು ತೋರಿಸುವವರು ಯಾರಿದ್ದಾರೆ? ನಾಶವೋ, ಸಂಹಾರವೋ, ಕ್ಷಾಮವೋ, ಶಕ್ತಿಯೋ. ನಾನು ನಿನ್ನನ್ನು ಹೇಗೆ ಸಂತೈಸಲಿ?
ರಾತ್ರಿಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾ ಗೋಳಾಡುವುದರಿಂದ ಕಣ್ಣೀರು ಕೆನ್ನೆಗಳ ಮೇಲೆ ನಿಂತೇ ಇದೆ; ಆಕೆಯ ಬಹುಮಂದಿ ಪ್ರಿಯರಲ್ಲಿ ಯಾರೂ ಸಂತೈಸರು; ಆಕೆಯ ಮಿತ್ರರೆಲ್ಲಾ ದ್ರೋಹಮಾಡಿ ಶತ್ರುಗಳಾಗಿದ್ದಾರೆ.
ಈ ವಿಪತ್ತುಗಳಿಂದ ಗೋಳಾಡುತ್ತಿರುವೆನು, ನನ್ನನ್ನು ಸಂತೈಸಿ ದಣಿವಾರಿಸತಕ್ಕವನು ದೂರವಾಗಿರುವುದರಿಂದ ನನ್ನ ಕಣ್ಣೀರು ಧಾರೆಧಾರೆಯಾಗಿ ಸುರಿಯುವುದು. ಶತ್ರುವು ಗೆದ್ದು ನನ್ನ ಮಕ್ಕಳು ಹಾಳಾದರು.
ಯೆರೂಸಲೇಮ್ ಕನ್ಯೆಯೇ, ನಾನು ನಿನಗೆ ಏನು ಹೇಳಲಿ, ನಿನ್ನನ್ನು ಯಾವುದಕ್ಕೆ ಹೋಲಿಸಲಿ? ಚೀಯೋನ್ ಕನ್ಯೆಯೇ, ನಿನ್ನನ್ನು ಸಂತೈಸಲು ಸಮಾಧಾನಕರ ಮಾತುಗಳನ್ನು ಎಲ್ಲಿಂದ ತರಲಿ? ನಿನ್ನ ನಾಶನವು ಸಾಗರದಷ್ಟು ಅಪಾರ, ನಿನ್ನನ್ನು ಯಾರು ಸ್ವಸ್ಥಮಾಡಬಲ್ಲರು?
ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ.
ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿರಿ.