TSK

TSK · ಪ್ರಲಾಪಗಳು 4:18

مراجع Treasury of Scripture Knowledge في ಕನ್ನಡ IRV.

العودة إلى المقطع

ಇಸ್ರಾಯೇಲರ ಅರಸನೇ ಯಾರನ್ನು ಹಿಂಬಾಲಿಸಿ ಹೊರಟಿರುವೇ? ಯಾರನ್ನು ಹಿಡಿಯಬೇಕೆಂದಿರುತ್ತೀ? ಸತ್ತ ನಾಯಿಯನ್ನೋ? ಒಂದು ಬಡ ನೊಣವನ್ನೋ?.

ತಲೆಯೆತ್ತಿದರೆ ಸಿಂಹದಂತೆ ನನ್ನನ್ನು ಬೇಟೆಯಾಡುವಿ; ನಿನ್ನ ಅದ್ಭುತ ಚಮತ್ಕಾರವನ್ನು ತಿರುಗಿ ನನ್ನಲ್ಲಿ ತೋರಿಸುವಿ.

ಆಗ ಯೆಹೋವನು ನನಗೆ, “ಸರಿಯಾಗಿ ನೋಡಿದ್ದಿ, ನನ್ನ ಮಾತನ್ನು ನೆರವೇರಿಸುವುದಕ್ಕೆ ನೀನು ಎಚ್ಚರಗೊಂಡಿರುವೆ ಎಂದು ತಿಳಿದುಕೋ” ಎಂಬುದಾಗಿ ಹೇಳಿದನು.

ಅವನು ಬೆನ್ಯಾಮೀನಿನ ಬಾಗಿಲನ್ನು ಹಾದುಹೋಗುತ್ತಿರುವಾಗ ಶೆಲೆಮ್ಯನ ಮಗನೂ ಹನನ್ಯನ ಮೊಮ್ಮಗನೂ ಆದ ಇರೀಯನು ಅಲ್ಲಿ ಪಹರೆಯ ವಿಚಾರಕನಾಗಿದ್ದು ಪ್ರವಾದಿಯಾದ ಯೆರೆಮೀಯನನ್ನು ಹಿಡಿದು, “ನೀನು ಕಸ್ದೀಯರಲ್ಲಿ ಮೊರೆಹೋಗಲು ಹೋಗುತ್ತಿದ್ದಿ” ಎಂದು ಹೇಳಿದನು.

ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, “ಬಾಬೆಲ್ ಪುರಿಯು ತುಳಿದು ತುಳಿದು ಸರಿಮಾಡುತ್ತಿರುವ ಕಣದಂತಿದೆ; ಸ್ವಲ್ಪ ಕಾಲವಾದ ಮೇಲೆ ಒಕ್ಕುವ ಸಮಯವು ಅದಕ್ಕೆ ಸಂಭವಿಸುವುದು.

ನಿಷ್ಕಾರಣವಾಗಿ ನನ್ನ ವೈರಿಗಳು ಪಕ್ಷಿಯನ್ನೋ ಎಂಬಂತೆ ನನ್ನನ್ನು ಆತುರದಿಂದ ಹಿಂದಟ್ಟಿದರು.

ಅಂತ್ಯವು ಬಂತು, ಅಂತ್ಯವು ಬಂದುಬಿಟ್ಟಿತು, ನಿನ್ನನ್ನು ಚಚ್ಚುವುದಕ್ಕೆ ಎಚ್ಚರಗೊಂಡಿದೆ, ಇಗೋ, ಬಂದೇ ಬಂತು!

“ನರಪುತ್ರನೇ, ಇಗೋ, ಇಸ್ರಾಯೇಲ್ ವಂಶದವರು, ‘ಇವನಿಗಾದ ದಿವ್ಯದರ್ಶನವು ಮುಂದೆ ಬಹುದೂರ ಕಾಲಕ್ಕೆ ಸಂಬಂಧಪಟ್ಟದ್ದು; ಬಹಳ ದಿನಗಳ ಮೇಲೆ ಆಗತಕ್ಕದ್ದನ್ನು ಮುಂತಿಳಿಸುತ್ತಾನೆ’ ಎಂದು ಹೇಳುತ್ತಾರೆ.