TSK

TSK · ಅರಣ್ಯಕಾಂಡ 4:12

مراجع Treasury of Scripture Knowledge في ಕನ್ನಡ IRV.

العودة إلى المقطع

ಅಲಂಕಾರವಾದ ದೀಕ್ಷಾವಸ್ತ್ರಗಳು ಅಂದರೆ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಪವಿತ್ರ ಯಾಜಕವಸ್ತ್ರಗಳು,

ಬಳಿಕ ಅವರು ಯೆಹೋವನ ಸಮ್ಮುಖದಲ್ಲಿರುವ ಮೇಜಿನ ಮೇಲೆ ನೀಲಿ ಬಟ್ಟೆಯನ್ನು ಹಾಸಿ ಅದರ ಮೇಲೆ ಮೇಜಿಗೆ ಸೇರಿದ ಪಾತ್ರೆಗಳನ್ನೂ, ಧೂಪಾರತಿಗಳನ್ನೂ, ಹೂಜಿಗಳನ್ನೂ, ಪಾನದ್ರವ್ಯಾರ್ಪಣೆಯ ಬಟ್ಟಲುಗಳನ್ನೂ ಇಡಬೇಕು. ಯಾವಾಗಲೂ ಇರಬೇಕಾದ ರೊಟ್ಟಿಗಳು ಅದರ ಮೇಲೆ ಇರಬೇಕು.

ದೇವಾಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಧೂಪಾರತಿ ಮೊದಲಾದ ತಾಮ್ರದ ಸಾಮಾನುಗಳನ್ನೂ ತೆಗೆದುಕೊಂಡು ಹೋದರು.

ಇನ್ನು ಕೆಲವರು ದೇವಾಲಯದ ಎಲ್ಲಾ ವಸ್ತುಗಳ ಮೇಲ್ವಿಚಾರಕರೂ, ಗೋದಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ, ಪರಿಮಳದ್ರವ್ಯ ಇವುಗಳ ಪಾರುಪತ್ಯಗಾರರು ಆಗಿದ್ದರು.

ಹಂಡೆ, ಸಲಿಕೆ, ಮುಳ್ಳುಸೌಟುಗಳು ಹೀಗೆ ಹೂರಾಮಾಬೀವನು ಅರಸನಾದ ಸೊಲೊಮೋನನ ಅಪ್ಪಣೆಯ ಮೇರೆಗೆ ಯೆಹೋವನ ಆಲಯಕ್ಕಾಗಿ ಅದರ ಎಲ್ಲಾ ಸಾಮಾನುಗಳನ್ನು ಒಪ್ಪ ಹಾಕಿದ ತಾಮ್ರದಿಂದ ಮಾಡಿ ಮುಗಿಸಿದನು.

ಹಾಗೆಯೇ ಕತ್ತರಿಗಳನ್ನೂ, ಬೋಗುಣಿಗಳನ್ನೂ ಧೂಪಾರತಿಗಳನ್ನೂ, ಅಗ್ಗಿಷ್ಟಿಕೆಗಳನ್ನು, ದೇವಾಲಯದ ಮಹಾಪರಿಶುದ್ಧ ಸ್ಥಳಕ್ಕಾಗಿರುವ ಬಂಗಾರದ ಕದಗಳು, ಪರಿಶುದ್ಧ ಸ್ಥಳದ ಬಂಗಾರದ ಕದಗಳು ಇವುಗಳೇ.