ನೆಹೆಮಿಯ 6:2
TSK
ಅವರಲ್ಲಿ ಸನ್ಬಲ್ಲಟ್, ಗೆಷೆಮರು ನನಗೆ, “ಓನೋ ಸಮಭೂಮಿಯ ಒಂದು ಗ್ರಾಮದಲ್ಲಿ ಒಂದು ಸಭೆ ಸೇರೋಣ ಬಾ” ಎಂದು ಹೇಳಿ ಕಳುಹಿಸಿದರು. ಇದು ಅವರು ನನಗೆ ಕೇಡು ಬಗೆಯುವುದಕ್ಕಾಗಿಯೇ ಎಂದು ತಿಳಿಯಿತು.
TSK
مراجع Treasury of Scripture Knowledge في ಕನ್ನಡ IRV.
ಅವರಲ್ಲಿ ಸನ್ಬಲ್ಲಟ್, ಗೆಷೆಮರು ನನಗೆ, “ಓನೋ ಸಮಭೂಮಿಯ ಒಂದು ಗ್ರಾಮದಲ್ಲಿ ಒಂದು ಸಭೆ ಸೇರೋಣ ಬಾ” ಎಂದು ಹೇಳಿ ಕಳುಹಿಸಿದರು. ಇದು ಅವರು ನನಗೆ ಕೇಡು ಬಗೆಯುವುದಕ್ಕಾಗಿಯೇ ಎಂದು ತಿಳಿಯಿತು.
ನೀನು ದುಷ್ಟರೊಡನೆಯೂ, ದುರ್ಜನಗಳ ಸಂಗಡಲೂ ನನ್ನನ್ನೂ ಎಳೆದುಕೊಂಡು ಹೋಗಬೇಡ. ಅವರು ಹೊರಗೆ ಒಳ್ಳೆಯದಾಗಲಿ ಎಂದು ಹೇಳಿದರೂ, ಒಳಗೆ ಕೇಡಾಗಲಿ ಎಂದು ಯೋಚಿಸುವವರು.
ಆಹಾ! ದಾರಿಗರು ತಂಗುವ ಗುಡಿಸಲು ಕಾಡಿನಲ್ಲಿ ನನಗೆ ಸಿಕ್ಕಿದರೆ ಎಷ್ಟೋ ಒಳ್ಳೆಯದು! ಆಗ ನಾನು ನನ್ನ ಜನರನ್ನು ತ್ಯಜಿಸಿ ಹೋಗುತ್ತಿದ್ದೆನು. ಅವರೆಲ್ಲರೂ ವ್ಯಭಿಚಾರಿಗಳ, ದ್ರೋಹಿಗಳ ಗುಂಪೇ.
ಮಿತ್ರನನ್ನು ನಂಬಬೇಡ, ಆಪ್ತನಲ್ಲಿ ಭರವಸವಿಡಬೇಡ. ನಿನ್ನ ಎದೆಯ ಮೇಲೆ ಒರಗುವವಳಿಗೆ ನಿನ್ನ ರಹಸ್ಯ ತಿಳಿಸಬೇಡ ಭದ್ರವಾಗಿಟ್ಟುಕೋ.