TSK

TSK · ಪ್ರಕಟನೆ 6:13

مراجع Treasury of Scripture Knowledge في ಕನ್ನಡ IRV.

العودة إلى المقطع

ಮಾಗದ ಹಣ್ಣುಗಳನ್ನು ಕಳೆದುಕೊಂಡ ದ್ರಾಕ್ಷಿಯ ಬಳ್ಳಿಯಂತೆ ಇರುವನು, ಎಣ್ಣೆಯ ಮರದ ಹಾಗೆ ತನ್ನ ಹೂವುಗಳನ್ನು ಉದುರಿಸಿಬಿಡುವನು.

ದೇಶವು ಪ್ರಲಾಪಿಸಿ ಕುಗ್ಗುತ್ತದೆ, ಲೆಬನೋನ್ ನಾಚಿಕೊಂಡು ಒಣಗುತ್ತದೆ, ಶಾರೋನ್ ಬೆಂಗಾಡಾಗಿದೆ, ಬಾಷಾನ್ ಮತ್ತು ಕರ್ಮೆಲ್ ಎಲೆಗಳನ್ನು ಉದುರಿಸಿಬಿಟ್ಟಿವೆ.

ಫರೋಹನನೇ, ಆಗ ನಾನು ನಿನ್ನ ಬೆಳಕನ್ನು ನಂದಿಸುವಾಗ, ಆಕಾಶಕ್ಕೆ ಮುಸುಕುಹಾಕಿ, ಅಲ್ಲಿನ ನಕ್ಷತ್ರಗಳನ್ನು ಮಸುಕುಮಾಡಿ, ಸೂರ್ಯನನ್ನು ಮೋಡದಿಂದ ಮುಚ್ಚಿಬಿಡುವೆನು, ಚಂದ್ರನೂ ಪ್ರಕಾಶಿಸನು.

ಅದು ನಕ್ಷತ್ರ ಗಣದ ಮೇಲೆ ಕೈಮಾಡುವಷ್ಟು ಹೆಚ್ಚಿ, ಆ ಗಣದ ಕೆಲವು ನಕ್ಷತ್ರಗಳನ್ನು ನೆಲಕ್ಕೆ ಕೆಡವಿ ತುಳಿದುಬಿಟ್ಟಿತು.

¶ ‹“ಆ ದಿನಗಳ ಸಂಕಟವು ಮುಗಿದಕೂಡಲೆ ಸೂರ್ಯನು ಕತ್ತಲಾಗಿ ಹೋಗುವನು, ಚಂದ್ರನು ಬೆಳಕು ಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ ಉದುರುವವು, ಆಕಾಶದ ಶಕ್ತಿಗಳು ಕದಲುವವು.›

¶ ಮೂರನೆಯ ದೇವದೂತನು ತನ್ನ ತುತ್ತೂರಿಯನ್ನು ಊದಿದನು. ಆಗ ಪಂಜಿನಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ನದಿಗಳ ಹಾಗೂ ನೀರಿನ ಬುಗ್ಗೆಗಳ ಮೂರರಲ್ಲಿ ಒಂದು ಭಾಗದ ಮೇಲೆ ಬಿದ್ದಿತು.