TSK

TSK · 1 ಪೂರ್ವಕಾಲವೃತ್ತಾ 21:2

مراجع Treasury of Scripture Knowledge في Kannada KJV.

العودة إلى المقطع

ಆಗ ಇಸ್ರಾಯೇಲ್‌ ಮಕ್ಕಳೆಲ್ಲರು ಹೊರಟು ಗಿಲ್ಯಾದು ಸಹಿತವಾಗಿ ದಾನ್‌ ಪಟ್ಟಣವು ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಸಭೆಯು ಒಬ್ಬ ಮನುಷ್ಯನ ಹಾಗೆ ಮಿಚ್ಪೆಯಲ್ಲಿ ಕರ್ತನ ಮುಂದೆ ಕೂಡಿಕೊಂಡಿತು.

ನಾನು ಮಾಡದೆ ಇದ್ದರೆ ದೇವರು ಅಬ್ನೇರನಿಗೆ ಹೀಗೆಯೂ ಮತ್ತು ಅಧಿಕವಾಗಿಯೂ ಮಾಡಲಿ ಅಂದನು.

ಅರಸನು ಸೈನ್ಯಾಧಿಪತಿಯಾದ ಯೋವಾಬನಿಗೆ--ನಾನು ಜನರ ಲೆಕ್ಕವನ್ನು ತಿಳಿಯುವ ಹಾಗೆ ನೀನು ದಾನ್‌ನಿಂದ ಬೇರ್ಷೆಬದ ವರೆಗೂ ಇರುವ ಇಸ್ರಾಯೇಲ್‌ ಎಲ್ಲಾ ಗೋತ್ರಗಳಲ್ಲಿ ಹೋಗಿ, ಜನರನ್ನು ಲೆಕ್ಕಿಸು, ಅಂದನು.

ಹೀಗೆಯೇ ದಾನ್‌ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಸೊಲೊಮೋನನ ಸಮಸ್ತ ದಿವಸಗಳಲ್ಲಿ ಯೆಹೂದ ಮತ್ತು ಇಸ್ರಾಯೆಲಿನಲ್ಲಿರುವ ಪ್ರತಿ ಮನು ಷ್ಯನು ತನ್ನ ದ್ರಾಕ್ಷೇ ಗಿಡದ ಕೆಳಗೂ ತನ್ನ ಅಂಜೂರ ಗಿಡದ ಕೆಳಗೂ ಭರವಸದಿಂದ ವಾಸವಾಗಿದ್ದನು.

ಆದದರಿಂದ ಅವರು ಯೆರೂಸಲೇಮಿನಲ್ಲಿ ಇಸ್ರಾಯೇಲಿನ ದೇವರಾದ ಕರ್ತನಿಗೆ ಪಸ್ಕವನ್ನು ಆಚರಿಸಲು ಬರಬೇಕೆಂದು ಬೇರ್ಷೆಬವು ಮೊದಲುಗೊಂಡು ದಾನಿನ ವರೆಗೂ ಸಮಸ್ತ ಇಸ್ರಾಯೇಲಿನಲ್ಲಿ ಕೂಗಿ ಸಾರಲು ನಿರ್ಣಯಿ ಸಿದರು. ಯಾಕಂದರೆ ಬರೆಯಲ್ಪಟ್ಟ ಹಾಗೆ ಅವರು ಅದನ್ನು ಬಹು ಕಾಲದಿಂದ ಆಚರಿಸಿದ್ದಿಲ್ಲ.

ಮನುಷ್ಯನ ಗರ್ವವು ತನ್ನನ್ನು ಹೀನಸ್ಥಿತಿಗೆ ತರುವದು; ಆತ್ಮದಲ್ಲಿ ದೀನರಾಗಿರುವವರು ಸನ್ಮಾನಹೊಂದುವರು.