1 ಸಮುವೇಲನು 3:18
TSK
ಸಮುವೇಲನು ಒಂದನ್ನೂ ಮರೆಮಾಡದೆ ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿದನು. ಅದಕ್ಕವನು--ಅದು ಕರ್ತನದೇ ಆಗಿದೆ. ಆತನು ಸರಿತೋರುವದನ್ನು ಮಾಡಲಿ ಅಂದನು.
TSK
مراجع Treasury of Scripture Knowledge في Kannada KJV.
ಸಮುವೇಲನು ಒಂದನ್ನೂ ಮರೆಮಾಡದೆ ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿದನು. ಅದಕ್ಕವನು--ಅದು ಕರ್ತನದೇ ಆಗಿದೆ. ಆತನು ಸರಿತೋರುವದನ್ನು ಮಾಡಲಿ ಅಂದನು.
ಆಗ ಹಿಜ್ಕೀಯನು ಯೆಶಾಯನಿಗೆ ನೀನು ಹೇಳಿದ ಕರ್ತನ ವಾಕ್ಯವು ಉತ್ತಮವಾದದ್ದು ಅಂದನು. ಅವನು--ನನ್ನ ದಿವಸಗಳಲ್ಲಿ ಸಮಾಧಾ ನವೂ ಸತ್ಯವೂ ಇದ್ದರೆ ಅದು ಉತ್ತಮವಲ್ಲವೋ ಅಂದನು.
ಆಮೇಲೆ ಆತನು ಸ್ವಲ್ಪದೂರ ಹೋಗಿ ಅಡ್ಡಬಿದ್ದು ಪ್ರಾರ್ಥಿ ಸುತ್ತಾ--ಓ ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ; ಆದಾಗ್ಯೂ ನನ್ನ ಚಿತ್ತದಂತಲ್ಲ; ನಿನ್ನ ಚಿತ್ತದಂತೆಯೇ ಆಗಲಿ ಅಂದನು.
ಆತನು ಅವರಿಗೆ--ನೀವು ಪ್ರಾರ್ಥನೆ ಮಾಡುವಾಗ--ಪರಲೋಕದಲ್ಲಿರುವ ನಮ್ಮ ತಂದೆ ಯೇ, ನಿನ್ನ ನಾಮವು ಪರಿಶುದ್ಧವಾಗಲಿ, ನಿನ್ನ ರಾಜ್ಯವು ಬರಲಿ, ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಭೂಮಿಯಲ್ಲಿಯೂ ನೆರವೇರಲಿ.