TSK

TSK · ಅಪೊಸ್ತಲರ ಕೃತ್ಯಗ 9:21

مراجع Treasury of Scripture Knowledge في Kannada KJV.

العودة إلى المقطع

ನಿಶ್ಚಯ ವಾಗಿ ಯಾಕೋಬನಿಗೆ ವಿರೋಧವಾಗಿ ಶಕುನವಿಲ್ಲ; ಇಸ್ರಾಯೇಲನಿಗೆ ವಿರೋಧವಾಗಿ ಯಾವ ಕಣಿ ಇಲ್ಲ; ತತ್ಕಾಲದಲ್ಲಿ ದೇವರು ಏನು ಮಾಡಿದನೆಂದು ಯಾಕೋಬನ ವಿಷಯವಾಗಿಯೂ ಇಸ್ರಾಯೇಲಿನ ವಿಷಯವಾಗಿಯೂ ಹೇಳುವರು.

ಇಗೋ, ನನಗೆ ಕರ್ತನು ದಯಪಾಲಿಸಿದ ಮಕ್ಕಳೂ ನಾನೂ ಚೀಯೋನ್‌ ಪರ್ವತದಲ್ಲಿ ವಾಸವಾಗಿರುವ ಸೈನ್ಯಗಳ ಕರ್ತನಿಂದುಂಟಾದ ಗುರುತುಗಳಾಗಿಯೂ ಅದ್ಭುತ ಗಳಾಗಿಯೂ ಇಸ್ರಾಯೇಲಿನಲ್ಲಿದ್ದೇವೆ.

ಆತನು ತನ್ನ ಸ್ವಂತ ದೇಶಕ್ಕೆ ಬಂದು ಅವರ ಸಭಾಮಂದಿರ ದಲ್ಲಿ ಅವರಿಗೆ ಬೋಧಿಸಿದ್ದರಿಂದ ಅವರು ವಿಸ್ಮಯ ಗೊಂಡು--ಈ ಜ್ಞಾನವೂ ಈ ಮಹತ್ಕಾರ್ಯಗಳೂ ಈತನಿಗೆ ಎಲ್ಲಿಂದ ಬಂದಿದ್ದಾವು?

ಹೀಗಿರುವದರಿಂದ ನೆರೆಯವರೂ ಅವನು ಮೊದಲು ಕುರುಡನಾಗಿದ್ದಾಗ ಅವನನ್ನು ನೋಡಿದವರೂ-- ಕೂತುಕೊಂಡು ಭಿಕ್ಷೆ ಬೇಡುತ್ತಿದ್ದವನು ಇವನೇ ಅಲ್ಲವೋ ಅಂದರು.

ಅವರೆ ಲ್ಲರೂ ವಿಸ್ಮಯಗೊಂಡು ಸಂದೇಹಪಟ್ಟವರಾಗಿ-- ಇದರ ಅರ್ಥವೇನು ಎಂದು ಒಬ್ಬರನ್ನೊಬ್ಬರು ಕೇಳುವವರಾದರು.

ಅವರು ಪೇತ್ರ ಯೋಹಾನರ ಧೈರ್ಯವನ್ನು ನೋಡಿ ಇವರು ವಿದ್ಯೆಯಿಲ್ಲದವರೂ ತಿಳುವಳಿಕೆ ಯಿಲ್ಲದವರೂ ಎಂದು ಗ್ರಹಿಸಿ ಆಶ್ಚರ್ಯಪಟ್ಟು ಅವರು ಯೇಸುವಿನೊಂದಿಗೆ ಇದ್ದವರೆಂದು ತಿಳಿದುಕೊಂಡರು.

ಸೌಲನು ಕರ್ತನ ಶಿಷ್ಯರಿಗೆ ಇನ್ನೂ ವಿರೋಧವಾಗಿ ಬೆದರಿಕೆಯ ಮಾತುಗಳ ನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಮಹಾ ಯಾಜಕನ ಬಳಿಗೆ ಹೋಗಿ

ಹಿಂದೆ ನಾನು ಯೆಹೂದ್ಯ ಮತದಲ್ಲಿದ್ದಾಗ ನನ್ನ ನಡತೆ ಎಂಥದ್ದಾಗಿತ್ತೆಂದು ನೀವು ಕೇಳಿದ್ದೀರಷ್ಟೆ; ನಾನು ದೇವರ ಸಭೆಯನ್ನು ಮಿತಿವಿಾರಿ ಹಿಂಸೆಪಡಿಸಿ ಹಾಳುಮಾಡುತ್ತಿದ್ದೆನು.

ಇಗೋ, ನಾವು ದೇವರ ಪುತ್ರರೆಂದು ಕರೆಯಲ್ಪಡುವದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನಲ್ಲಾ; ಈ ಕಾರಣದಿಂದ ಲೋಕವು ನಮ್ಮನ್ನು ತಿಳಿದುಕೊಳ್ಳು ವದಿಲ್ಲ; ಯಾಕಂದರೆ ಅದು ಆತನನ್ನು ತಿಳಿದು ಕೊಳ್ಳಲಿಲ್ಲ.