ಆಗ ಅವನು ಅವರಿಗೆ ಔತಣವನ್ನು ಮಾಡಿಸಿದನು. ಅವರು ತಿಂದು ಕುಡಿದರು;
TSK
TSK · ಆದಿಕಾಂಡ 21:8
مراجع Treasury of Scripture Knowledge في Kannada KJV.
ಮೂರನೆಯ ದಿನದಲ್ಲಿ ಫರೋಹನ ಜನನದ ದಿನವಾಗಿದ್ದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯ ಪಾನದಾಯಕನನ್ನೂ ಮುಖ್ಯ ರೊಟ್ಟಿಗಾರನನ್ನೂ ತನ್ನ ಸೇವಕರ ಮುಂದೆ ನಿಲ್ಲಿಸಿದನು.
ಅವರಿಗೆ ಸಂಸೋನನು--ನಾನು ನಿಮಗೆ ಒಂದು ಒಗಟನ್ನು ಹೇಳುವೆನು; ನೀವು ಅದನ್ನು ಔತಣದ ಈ ಏಳು ದಿವಸಗಳಲ್ಲಿ ಗ್ರಹಿಸಿಕೊಂಡು ನನಗೆ ಅದರ ಅರ್ಥವನ್ನು ನಿಜವಾಗಿ ಹೇಳಿದರೆ ನಾನು ನಿಮಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ದುಸ್ತು ವಸ್ತ್ರಗಳನ್ನೂ ಕೊಡುವೆನು.
ಅವಳು ಮೊಲೆ ಬಿಡಿಸಿದ ತರುವಾಯ ಅವನನ್ನು ತನ್ನ ಸಂಗಡ ತೆಗೆದುಕೊಂಡು ಮೂರು ಹೋರಿಗಳನ್ನೂ ಒಂದು ಎಫದ ಹಿಟ್ಟನ್ನೂ ಒಂದು ಬುದ್ದಲಿ ದ್ರಾಕ್ಷಾರಸವನ್ನೂ ತೆಗೆದುಕೊಂಡು ಶೀಲೋವಿನಲ್ಲಿರುವ ಕರ್ತನ ಮನೆಗೆ ಹೋದಳು.
ಹೀಗೆಯೇ ಅಬ್ನೇರನು ತನ್ನ ಸಂಗಡ ಇಪ್ಪತ್ತು ಜನರನ್ನು ಕರಕೊಂಡು ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಬಂದನು. ದಾವೀದನು ಅಬ್ನೇರ ನಿಗೂ ಅವನ ಸಂಗಡ ಬಂದ ಜನರಿಗೂ ಔತಣ ಮಾಡಿಸಿದನು.
ತನ್ನ ಆಳಿಕೆಯ ಮೂರನೇ ವರುಷ ದಲ್ಲಿ ಅವನು ತನ್ನ ಸಮಸ್ತ ಪ್ರಧಾನರಿಗೂ ಸೇವಕ ರಿಗೂ ಔತಣವನ್ನು ಮಾಡಿಸಿದನು. ಪಾರಸಿಯ, ಮೇದ್ಯರ ಬಲವಾದ ಸೈನ್ಯವೂ ಪ್ರಾಂತ್ಯಗಳ ಶ್ರೇಷ್ಠರೂ ಪ್ರಧಾನರೂ ಅವನ ಬಳಿಯಲ್ಲಿದ್ದರು.
ಆಕೆಯು ಲೊರು ಹಾಮಳನ್ನು ಮೊಲೆ ಬಿಡಿಸಿದ ಮೇಲೆ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು.