TSK

TSK · ಮತ್ತಾಯನು 5:21

مراجع Treasury of Scripture Knowledge في Kannada KJV.

العودة إلى المقطع

ಕೊಂದವನು ಸಭೆಯ ಮುಂದೆ ನ್ಯಾಯತೀರ್ಪಿಗೆ ನಿಲ್ಲುವ ವರೆಗೂ ಸಾಯದ ಹಾಗೆ ಅವು ನಿಮಗೆ ಸೇಡು ತೀರಿಸುವವನ ದೆಸೆಯಿಂದ ಆಶ್ರಯದ ಪಟ್ಟಣಗಳಾಗಿರಬೇಕು.

ಪ್ರಾಣಹತ್ಯ ಮಾಡುವ ಕೊಲೆಪಾತಕನನ್ನು ಸಾಕ್ಷಿಗಳ ಬಾಯಿಯ ಪ್ರಕಾರ ಕೊಲ್ಲಬೇಕು; ಸಾಯುವ ಹಾಗೆ ಯಾವ ಮನುಷ್ಯನಿಗಾದರೂ ವಿರೋಧವಾಗಿ ಒಬ್ಬನು ಸಾಕ್ಷಿ ಹೇಳಬಾರದು.

ಕರ್ತನು ನಿನಗೆ ನಿನ್ನ ಗೋತ್ರಗಳ ಪ್ರಕಾರ ಕೊಡುವ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ನ್ಯಾಯಾ ಧಿಪತಿಗಳನ್ನೂ ಅಧಿಕಾರಿಗಳನ್ನೂ ಇಟ್ಟುಕೊಳ್ಳಬೇಕು; ಅವರು ಜನಕ್ಕೆ ನೀತಿಯಿಂದ ನ್ಯಾಯತೀರಿಸಬೇಕು.

ಆಗ ಅವಳು ಮಾತನಾಡಿ--ಪೂರ್ವ ದಲ್ಲಿ ಮಾತನಾಡುವ ಮಾತು ಏನಂದರೆ, ಅವರು ಆಬೇಲಿನಲ್ಲಿ ನಿಶ್ಚಯವಾಗಿ ಕೇಳಿ ಹಾಗೆಯೇ ಕಾರ್ಯ ತೀರಿಸಿಕೊಳ್ಳುವರು.

ಅರಸನು ಅವ ನಿಗೆ--ಅವನು ಹೇಳಿದ ಪ್ರಕಾರ ಮಾಡು; ನನ್ನಿಂದಲೂ ನನ್ನ ತಂದೆಯ ಮನೆಯಿಂದಲೂ ಯೋವಾಬನು ಚೆಲ್ಲಿದ ನಿರಪರಾಧ ರಕ್ತವನ್ನು ತೊಲಗಿಸುವ ಹಾಗೆ ಅವನ ಮೇಲೆ ಬಿದ್ದು ಅವನನ್ನು ಹೂಣಿಡು.

ವ್ಯಭಿಚಾರ ಮಾಡಬಾರದು ಎಂದು ಪೂರ್ವಿಕರು ಹೇಳಿರುವದನ್ನು ನೀವು ಕೇಳಿದ್ದೀರಿ;

ಇದಲ್ಲದೆ--ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗಿಸು ಎಂದು ಹೇಳಿರುವದನ್ನು ನೀವು ಕೇಳಿದ್ದೀರಿ.